Wednesday, March 29, 2023

Latest Posts

ನಟ ಸುದೀಪ್ ಭೇಟಿ ಕುರಿತು ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಸುದೀಪ್ ಭೇಟಿ ಕುರಿತು ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ನಾವು ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ.
ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ. ಚಿತ್ರರಂಗದ ಸಮಸ್ಯೆ ಕುರಿತು ಪ್ರಣಾಳಿಕೆ ಮಾಡಲು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಮುಳಬಾಗಿಲು ತಾಲೂಕಿನಲ್ಲಿ ಕಪ್ಪಲಮಡಗೂ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್, ಪುನೀತ್ ಹಾಗೂ ವಿಷ್ಣುವರ್ಧನ್ ರೀತಿ ಸುದೀಪ್ ) ಉತ್ತಮ ನಾಯಕ ನಟ. ಕಾಂಗ್ರೆಸ್ ಪರ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ನಾನು ರಾಜಕೀಯ ಆಹ್ವಾನ ನೀಡಿಲ್ಲ, ಅನೇಕ ವಿಚಾರವಾಗಿ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ ಎಂದರು.

ಮೊದಲಿನಿಂದಲೂ ಅವರು ನಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ, ಒಳ್ಳೆಯ ಸ್ನೇಹಿತ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!