ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ಬಗ್ಗೆ ಈಗಾಗಲೇ ಎಲ್ಲೆಡೆ ಅಮೋಘ ಮೆಚ್ಚುಗೆ ಹೆಚ್ಚುತ್ತಲೇ ಇದ್ದು, ಸಿನಿಮಾ ನೋಡಿದ ಜನರು ರಿಷಬ್ ಶೆಟ್ಟಿಯ ನಟನೆಗೆ ಫಿದಾ ಆಗಿದ್ದಾರೆ .
ಈ ಸಿನಿಮಾ ಬಗ್ಗೆ ಸ್ಟಾರ್ ನಟರು ಪ್ರತಿಕ್ರಿಯಿಸುತ್ತಿದ್ದು, ಪ್ರಭಾಸ್, ಕಿಚ್ಚ ಸುದೀಪ್ ನಂತರ ಈಗ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ ಮೆಚ್ಚಿ ಹೊಗಳಿದ್ದಾರೆ.
‘ಕಾಂತಾರ ಒಂದು ಅಮೋಘ ಸಿನಿಮಾ ಸಾಧನೆ! ರಿಷಬ್ ಶೆಟ್ಟಿ ಕ್ಯಾಮೆರಾ ಮುಂದೆ ಮತ್ತು ಹಿಂದೆ ಎರಡೂ ಕಡೆ ಸಂಪೂರ್ಣ ಪ್ರತಿಭೆ! ಹೊಂಬಳೆ ಫಿಲ್ಮ್ಸ್ ನೀವು ನಿರ್ಮಿಸುತ್ತಿರುವ ಕಂಟೆಂಟ್ ಮನಸ್ಸಿಗೆ ಮುದ ನೀಡುವ ಪೋರ್ಟ್‌ಫೋಲಿಯೊ. ಹೊಸದಾರಿ ತೋರಿದ್ದಕ್ಕಾಗಿ ಧನ್ಯವಾದಗಳು! ಅದ್ಭುತಕ್ಕೂ ಮೀರಿದ ಕೊನೆಯ 20 ನಿಮಿಷ ಸುಂದರವಾಗಿತ್ತು ‘ ಎಂದಿದ್ದಾರೆ.
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರೂ ಸಿನಿಮಾ ನೋಡಿ ಮೆಚ್ಚಿ ಒಂದು ಪತ್ರವನ್ನು ಬರೆದಿದ್ದರು. ನಿರ್ದೇಶಕ ದೃಷ್ಟಿಕೋನವನ್ನು, ಅವರ ಕಲ್ಪನೆಯನ್ನೂ ಮೆಚ್ಚಿ ಹೊಗಳಿದ್ದರು.
ಅಷ್ಟೇ ಅಲ್ಲದೆ ಮುಂಬೈನ ಮರಾಠ ಮಂದಿರ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಮೂಲಭಾಷೆಯಲ್ಲಿ ರಿಲೀಸ್ ಆದ ಮೊದಲ ಸೌತ್ ಸಿನಿಮಾ ಎಂಬ ಹೆಗ್ಗಳಿಕೆಗೂ ಕಾಂತಾರ ಪಾತ್ರವಾಗಿದೆ.