ಹೆಚ್ಚುತ್ತಿರುವ ಖಾದ್ಯ ತೈಲ ಬೆಲೆ, ಆಹಾರ ಸಚಿವಾಲಯ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇಂಡೋನೇಷ್ಯಾವು ಪಾಮ್‌ ಆಯಿಲ್‌ ಪೂರೈಕೆಯನ್ನು ನಿಷೇಧಿಸಿರುವ ಬೆನ್ನಲ್ಲೇ ಭಾರತದಲ್ಲಿ ಖಾದ್ಯ ತೈಲದ ದಾಸ್ತಾನು ಸಾಕಷ್ಟಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಆಹಾರ ಮತ್ತು ನಾಗರೀಕ ಸರಬರಾಜು ಸಚಿವಾಲಯವು ಮಾಹಿತಿ ನೀಡಿದ್ದು ಬಾರತದಲ್ಲಿ ಖಾದ್ಯ ತೈಲ ದಾಸ್ತಾನು ಸಾಕಷ್ಟಿದೆ. ಈಗಾಗಲೇ 21 ಲಕ್ಷ ಮೆಟ್ರಿಕ್‌ ಟನ್‌ ನಷ್ಟು ದಾಸ್ತಾನು ಇದ್ದು ಇನ್ನೂ 12 ಲಕ್ಷ ಮೆಟ್ರಿಕ್‌ ಟನ್‌ ಸಾಗಣೆಯ ಹಂತದಲ್ಲಿದ್ದು ಮೇ ಕೊನೆಯಲ್ಲಿ ಬಂದು ತಲುಪಲಿದೆ ಎಂದು ಹೇಳಿದೆ.

ಅಲ್ಲದೇ ಎಣ್ಣೆಬೀಜಗಳ ಉತ್ಪಾದನೆಯೂ ಅಧಿಕವಾಗಿದ್ದು ಸೊಯಾಬೀನ್‌ ಉತ್ಪಾದನೆಯು ಧನಾತ್ಮಕವಾಗಿದೆ. ಫೆಬ್ರವರಿಯ ಸಮೀಕ್ಷೆಗಳ ಪ್ರಕಾರ 2021-22 ರಲ್ಲಿ 126.10ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯ ಪ್ರಮಾಣ ಹೆಚ್ಚಿದ್ದು ಕಳೆದ ವರ್ಷ 112 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿತ್ತು. ಇದರೊಂದಿಗೆ ಸಾಸಿವೆ ಉತ್ಪಾದನೆಯೂ ಕೂಡ ಜಾಸ್ತಿಯಾಗುವ ನಿರೀಕ್ಷೆಯಿದ್ದು ಸಾಸಿವೆ ಬಿತ್ತನೆ ಪ್ರಮಾಣವು 37% ದಷ್ಟು ಹೆಚ್ಚಾಗಿದ್ದು 114 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯ ನಿರೀಕ್ಷೆಯಿದೆ.

ಗ್ರಾಹಕರ ಹಿತ ದೃಷ್ಟಿಯಿಂದ ಪ್ರಮುಖ ತೈಲ ಉತ್ಪಾದಕ ಸಂಘಗಳೊಂದಿಗೆ ವಿವಿಧ ಹಂತದ ಮಾತುಕತೆ ನಡೆಸಲಾಗುತ್ತಿದ್ದು ಗ್ರಾಹರಿಗೆ ಹೊರೆಯಾಗದಂತೆ ಕಾಳಜಿ ವಹಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!