ಬಸ್‌ನಲ್ಲೋ ಅಥವಾ ಮಾರ್ಕೆಟ್‌ನಲ್ಲೋ ಫೋನ್ ಕಳೆದು ಹೋದ್ರೆ ಏನು ಮಾಡ್ತೀರಿ? ನಿಮ್ಮ ಫೋನ್ ಮತ್ತೆ ಸಿಗಬಹುದು ಅಥವಾ ಸಿಗದೇ ಇರಬಹುದು ಬಟ್ ಫೋನ್ ಕಳೆದುಕೊಂಡ ನಂತರ ಈ ಕೆಲಸಗಳನ್ನು ತಪ್ಪದೇ ಮಾಡಿ..
ಮೊದಲು, ನಿಮ್ಮ ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ. ಇದಕ್ಕಾಗಿ ನೀವು ನಿಮ್ಮ ಟೆಲಿಕಾಂ ಆಪರೇಟರ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು ಅಥವಾ 14422 ಸಂಖ್ಯೆಯನ್ನು ಡಯಲ್ ಮಾಡಬಹುದು.
ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ. ಎಫ್‌ಐಆರ್‌ನಲ್ಲಿ ಫೋನ್ IMEI ಸಂಖ್ಯೆ, ಇತರ ಮಾಹಿತಿಯನ್ನು ಒದಗಿಸಬೇಕು.
ನೀವು ಫೋನ್ನಲ್ಲಿ ‘ಫೈಂಡ್ ಮೈ ಡಿವೈಸ್’ ಅಥವಾ ‘ಫೈಂಡ್ ಮೈ ಫೋನ್’ ವೈಶಿಷ್ಟ್ಯವನ್ನು ಆನ್ ಮಾಡಿದ್ದರೆ, ರಿಮೋಟ್ ಆಗಿ ಲಾಕ್ ಮಾಡಲು ಮತ್ತು ನಿಮ್ಮ ಡೇಟಾವನ್ನು ಅಳಿಸಲು ನೀವು ಅದನ್ನು ಬಳಸಬಹುದು.