ಮನುಷ್ಯ ಸಾಯುವಾಗ ಯಾವ ರೀತಿ ಅನುಭವ ಆಗುತ್ತದೆ? : ವಿಜ್ಞಾನಿಗಳು ಕಂಡುಕೊಂಡಿದ್ದಿಷ್ಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೆಲವೊಂದು ವಿಷಯಗಳಿಗೆ ಸ್ಪಷ್ಟ ಉತ್ತರ ಸಿಗೋದಿಲ್ಲ. ಅರ್ಥ ಆಗದ ಈ ವಿಷಯಗಳಲ್ಲಿ ಸಾವು ಕೂಡ ಒಂದು, ಕ್ಷಣಮಾತ್ರದಲ್ಲಿ ಸಾವು ಹೇಗೆ ಸಂಭವಿಸುತ್ತದೆ, ಆ ಸಮಯದಲ್ಲಿ ಮನುಷ್ಯರ ಮನಸ್ಥಿತಿ ಹೇಗಿರುತ್ತದೆ, ಮೆದುಳು ಏನನ್ನು ಆಲೋಚಿಸುತ್ತದೆ ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದಿದ್ದೇ.

ವಿಜ್ಞಾನಿಗಳ ತಂಡವೊಂದು ಮನುಷ್ಯ ಸಾಯುವ ಸಮಯದಲ್ಲಿ ಆತನ ಮೆದುಳು ಯಾವ ರೀತಿ ಕೆಲಸ ಮಾಡುತ್ತದೆ, ಅವನಿಗೆ ಆಗುವ ಅನುಭವ ಏನು ಎಂಬುದರ ಬಗ್ಗೆ ಅಧ್ಯಯನ ನಡೆಸಿದೆ.

ವಿಜ್ಞಾನಿಗಳು 87 ವರ್ಷದ ವ್ಯಕ್ತಿಯ ಮೆದುಳನ್ನು ಎಲೆಕ್ಟ್ರೋಎನ್ಸೆಫಾಲೋಗ್ರಫಿ ಮೂಲಕ ಅಧ್ಯಯನ ಮಾಡುತ್ತಿದ್ದ ವೇಳೆ, ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ವೇಳೆ ಮೆದುಳಿನ ಕಾರ್ಯಾಚರಣೆ ಹೇಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದ್ದು, ಮನುಷ್ಯ ಸಾಯುವ ಮೊದಲು ಆತನ ಇಡೀ ಜೀವನ ಕಣ್ಣಮುಂದೆ ಬರುತ್ತದಂತೆ. ಎಲ್ಲ ಘಟನೆಗಳನ್ನು ಆತ ನೆನಪಿಸಿಕೊಳ್ಳುತ್ತಾನೆ. ಕನಸಿನ ಮತ್ತು ಧ್ಯಾನದ ಸ್ಥಿತಿಯಲ್ಲಿ ಮೆದುಳು ಇರುತ್ತದೆ. ತನ್ನ ಇಡೀ ಲೈಫ್ ರೀಕಾಲ್ ಆಗುತ್ತದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!