ಹರ್ಷ ಹತ್ಯೆ ಆರೋಪಿಗಳನ್ನು ಎನ್‌‌ ಕೌಂಟರ್ ಮಾಡಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್

ಹೊಸದಿಗಂತ ವರದಿ, ಮಂಡ್ಯ:

ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು. ಇಲ್ಲವೇ ಗಲ್ಲಿಗೆ ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಒತ್ತಾಯಿಸಿದರು.
ಹತ್ಯೆಯಾದ ಹರ್ಷನ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹರ್ಷನ ಹತ್ಯೆ ಮಾಡಿದವರನ್ನು 24 ಗಂಟೆಯೊಳಗೆ ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಇಟ್ಟಿದ್ದೇವೆ. ಅದರಲ್ಲಿ ಪ್ರಮುಖವಾಗಿ ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಗೆ ಬಂದು ಆನಂದವಾಗಿ ಓಡಾಡಿಕೊಂಡಿರುವುದು ಸರಿಯಲ್ಲಘಿ. ಇದರಿಂದ ಇಂತಹುದ್ದೇ ಕಿಡಿಗೇಡಿತನ, ದೇಶದ್ರೋಹ ಮಾಡುವುದಕ್ಕೆ ಅವಾಕಶ ಮಾಡಿಕೊಡಬಾರದು ಎಂದು ಒತ್ತಾಯಿಸಿದ್ದೇನೆ ಎಂದರು.

ಹಿಜಾಬ್‌ ನ ಮುಂದುವರಿದ ಭಾಗ: ಹಿಜಾಬ್ ಕೇವಲ ಮೂರು ಅಡಿ ಬಟ್ಟೆಯ ಪ್ರಶ್ನೆಯಲ್ಲ. ಇದರ ಹಿಂದೆ ಇರುವಂತಹ ಈ ದುಷ್ಟ ಮಾನಸಿಕತೆ ಇದೆಯಲ್ಲ ಅದು ಈ ರೀತಿಯ ಕೆಲಸ ಮಾಡುತ್ತಿದೆ ಎಂದರು.
ವಿದ್ಯಾರ್ಜನೆ ಇಲ್ಲದಿದ್ದರೂ ನಮಗೆ ಚಿಂತೆ ಇಲ್ಲ, ಆದರೆ ನಮಗೆ ಧರ್ಮ ಮತ್ತು ಹಿಜಾಬ್ ಅಗತ್ಯ ಎಂದು ಹೇಳುವುದು ಮೂರ್ಖತನದ ಪ್ರವೃತ್ತಿಯಾಗಿದೆ. ಹಿಜಾಬ್ ಪ್ರಾರಂಭವಾದ ಸೌದಿ ಅರೇಬಿಯಾದಲ್ಲೇ ಹಿಜಾಬ್ ನಿಷೇಧಿಸಲಾಗಿದೆ. ಇನ್ನು ಹಲವಾರು ಮುಸ್ಲೀಂ ರಾಷ್ಟ್ರಗಳಲ್ಲೂ ಹಿಜಾಬ್ ನಿಷೇಧಿಸಲಾಗಿದೆ. ಅವೆಲ್ಲವೂ ಸಂಪೂರ್ಣ ಇಸ್ಲಾಂಮಿಕ್ ರಾಷ್ಟ್ರಗಳಾಗಿವೆ. ಇಲ್ಲಿ ಇಸ್ಲಾಂ ಪೂರ್ಣವಾಗಿಲ್ಲ. ಪೂರ್ಣವಾಗಬೇಕು ಎಂಬ ಕಾರಣಕ್ಕೆ ಇಂತಹ ಆಟವಾಡುತ್ತಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!