ಪೂರ್ವಜರು ಕನಸಿನಲ್ಲಿ ಬಂದು ಹಾಗೆ ಮಾಯವಾಗಿಬಿಟ್ಟರೆ ಏನೆಂದು ಅರ್ಥ? ಇದು ಶುಭವೋ? ಅಶುಭವೋ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನಂತರ ಎಷ್ಟೋ ಸಮಯದವರೆಗೂ ಅವರನ್ನು ನಾವು ಕನಸಿನಲ್ಲಿ ಕಾಣುತ್ತೇವೆ. ಕೆಲವೊಮ್ಮೆ ಪ್ರೀತಿಪಾತ್ರರು ತೀರಿಕೊಂಡು ಐದಾರು ಅಥವಾ ಹತ್ತಾರು ವರ್ಷಗಳು ಕಳೆದರೂ ಅವರ ನೆನಪು ಮಾಸೋದಿಲ್ಲ. ಅದು ಕನಸಾಗಿ ಕಾಣಿಸುತ್ತದೆ.

ನಮ್ಮ ಪೂರ್ವಜರು, ಮರಣ ಹೊಂದಿದ ಪ್ರೀತಿಪಾತ್ರರು ಕನಸಿನಲ್ಲಿ ಬಂದು ತಕ್ಷಣ ಹಾಗೇ ಹೋದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಮಾಡುವ ಪೂಜೆ, ಪುನಸ್ಕಾರದಲ್ಲಿ ಏನೋ ಕೊರತೆಯಾಗಿದೆ ಎಂದು ಅರ್ಥವಂತೆ!

ಇನ್ನು ಪೂರ್ವಜರು ಸಿಹಿತಿಂಡಿಗಳನ್ನು ಹಂಚುವುದನ್ನು ಅಥವಾ ಏನನ್ನಾದರೂ ನೀಡುವ ರೀತಿ ನಿಮಗೆ ಕನಸು ಕಂಡರೆ ಅದನ್ನು ಶುಭ ಎಂದು ಹೇಳಲಾಗುತ್ತದೆ. ನಿಮ್ಮ ಪೂರ್ವಜರಿಗೆ ನೀವು ನೀಡಿದ ಶ್ರಾದ್ಧ ಕರ್ಮಗಳಿಂದ ನೀವು ತುಂಬಾ ಸಂತೋಷವಾಗಿದ್ದೀರಿ ಎಂದರ್ಥ. ಅಲ್ಲದೆ, ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಸಂತೋಷದ ಸುದ್ದಿಯನ್ನು ನೀವು ಕೇಳುತ್ತೀರಿ ಎಂದರ್ಥವನ್ನು ಸೂಚಿಸುತ್ತದೆ.

ಪೂರ್ವಜರು ಕನಸಿನಲ್ಲಿ ಮಾತನಾಡುತ್ತಿರುವುದನ್ನು ಕಂಡರೂ ಆ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂರ್ವಜರು ಕನಸಿನಲ್ಲಿ ಮಾತನಾಡುವುದನ್ನು ನೋಡುವುದು ಎಂದರೆ ಮುಂದಿನ ದಿನಗಳಲ್ಲಿ ಉತ್ತಮ ಯಶಸ್ಸು. ನೀವು ಅಂತಹ ಕನಸನ್ನು ನೋಡಿದರೆ, ಮುಂಬರುವ ಅವಧಿಯು ತುಂಬಾ ಒಳ್ಳೆಯದು ಎಂಬ ಸೂಚನೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!