ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಹೋಗುವಾಗ ಎದುರಿಗೆ ಹಾವು ಕಾಣಿಸಿಬಿಟ್ರೆ ಜೀವವೇ ಬಾಯಿಗೆ ಬಂದ ರೀತಿ ಆಗುತ್ತದೆ, ಇನ್ನು ಝೂನಲ್ಲಿರೋ ಹಾವುಗಳನ್ನು ನೋಡಿದಾಗಲೇ ಮೈ ಜುಂ ಎನಿಸುತ್ತದೆ.
ಆದರೆ ಇಲ್ಲೊಬ್ಬ ವ್ಯಕ್ತಿ ಜೀವಂತ ಹಾವಿನ ತಲೆಯನ್ನು ತನ್ನ ಬಾಯಿಯಿಂದ ಕಚ್ಚಿ ತಲೆಯನ್ನು ನೆಲಕ್ಕೆ ಎಸೆದಿದ್ದಾನೆ. ನಂತರ ಹಾವಿನ ಉಳಿದ ಭಾಗವನ್ನು ತಿಂದಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನ ಇನ್ನೇನನ್ನು ನೋಡ್ಬೇಕು ಎಂದು ಭಯಪಟ್ಟಿದ್ದಾರೆ. ವನ್ಯಜೀವಿ ರಕ್ಷಣಾ ಕಾಯ್ದೆ ಅನ್ವಯ ವ್ಯಕ್ತಿ ವಿರುದ್ಧ ದೂರು ದಾಖಲಿಸಲಾಗಿದೆ.
https://twitter.com/ARSHAD_93900/status/1660461096124424192?s=20