ಹೊಸದಿಗಂತ ಡಿಜಿಟಲ್ ಡೆಸ್ಕ್:
29 ವರ್ಷಗಳ ದಾಂಪತ್ಯ ಜೀವನಕ್ಕೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹಾಗೂ ಸೈರಾ ಬಾನು ಅಂತ್ಯ ಹಾಡಿದ್ದಾರೆ. ಸದಾ ಖುಷಿ ಖುಷಿಯಾಗಿ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿದ್ದ ಜೋಡಿ ವಿಚ್ಛೇದನ ಪಡೆದಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಿಗೂ ಬಂದಿದೆ, ಇದಕ್ಕೆ ಉತ್ತರ ಇಲ್ಲಿದೆ..
ರೆಹಮಾನ್ ಹಾಗೂ ಸೈರಾ ವಿಚ್ಛೇದನಕ್ಕೆ ಲೈಫ್‌ಸ್ಟೈಲ್ ಕಾರಣ ಎನ್ನಲಾಗಿದೆ. ಹೌದು, ರೆಹಮಾನ್ ಕಂಪೋಸಿಷನ್, ಶೋಗಳು ಹಾಗೂ ರೆಕಾರ್ಡಿಂಗ್‌ನಲ್ಲಿ ಸದಾ ಬ್ಯುಸಿ ಇರುತ್ತಾರೆ. ಮನೆಯಲ್ಲಿ ಕಡಿಮೆ ಸಮಯ ಕಳೆಯುತ್ತಾರೆ, ಕುಟುಂಬಕ್ಕೆ ಸಮಯ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ಆಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತ ಹೇಳಿಕೆ ನೀಡಿಲ್ಲ.