ಬಿಸಿಲ ಧಗೆಗೆ ಮರದ ತುದಿಯಲ್ಲೇ ಪ್ರಜ್ಞೆ ತಪ್ಪಿದ ಯುವಕ, ಆಮೇಲೇನಾಯ್ತು?

ದಿಗಂತ ವರದಿ ಹಾಸನ :

ಹೆಚ್ಚಿನ ಬಿಸಿಲ ತಾಪಕ್ಕೆ ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ನವೀನ್ (21) ಸಾವಿನ ದವಡೆಯಿಂದ ಪಾರಾದ ಯುವಕ. ನವೀನ್ ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸಲು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರವೇರಿದ್ದ . ತೆಂಗಿನ ಗರಿಗಳನ್ನು ಕತ್ತರಿಸಿ ಕೆಳಗೆ ಇಳಿಯುತ್ತಿದ್ದಾಗ ಅತಿಯಾದ ಬಿಸಿಲಿನ ತಾಪಕ್ಕೆ ಪ್ರಜ್ಞಾಹೀನನಾಗಿ ತೆಂಗಿನ ಮರದಲ್ಲೇ ನೇತಾಡಿದ್ದಾನೆ.

ನವೀನ್ ಸುಮಾರು ಐವತ್ತು ಅಡಿ ಎತ್ತರದಲ್ಲಿ 45 ನಿಮಿಷಗಳ ಕಾಲ‌ ಪ್ರಜ್ಞೆ ತಪ್ಪಿ ತೆಂಗಿನ ಮರದಲ್ಲೇ ಸಿಲುಕಿಕೊಂಡಿದ್ದ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ನವೀನ್ ನನ್ನು ರಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!