ಮೂತ್ರ ವಿಸರ್ಜನೆ ಕಂಟ್ರೋಲ್ ಮಾಡೋದು ಮಹಿಳೆಯರೇ ಹೆಚ್ಚು, ಇದರಿಂದ ಏನಾಗುತ್ತದೆ ಗೊತ್ತಾ?

ಪುರುಷರಷ್ಟೇ ಮಹಿಳೆಯರೂ ನೀರು ಕುಡಿಯುತ್ತಾರೆ. ಆದರೆ ಅವರಷ್ಟು ಬಾರಿ ವಾಶ್‌ರೂಂಗೆ ಹೋಗೋದಿಲ್ಲ. ಆಫೀಸಿನಲ್ಲಿ ಪದೇ ಪದೆ ಎದ್ದು ಹೋಗಲು ಮುಜುಗರ ಮಾಡಿಕೊಳ್ಳುತ್ತಾರೆ. ಇನ್ನು ಸರಿಯಾದ, ಹೈಜಿನಿಕ್ ಆಗಿರದ ಬಾತ್‌ರೂಂ ಇದ್ದರೆ ಅಲ್ಲಿ ಹೋಗೋದೇ ಇಲ್ಲ. ಮನೆಗೆ ಬರುವವರೆಗೂ ಮೂತ್ರ ವಿಸರ್ಜನೆ ಮಾಡುವುದೇ ಇಲ್ಲ. ಈ ರೀತಿ ಮೂತ್ರ ವಿಸರ್ಜನೆ ಹೋಲ್ಡ್ ಮಾಡೋದರಿಂದ ಸಮಸ್ಯೆಗಳೇ ಹೆಚ್ಚು…

ನಿಮ್ಮ ದೇಹಕ್ಕೆ ವಿರುದ್ಧ
ನಿಮ್ಮ ದೇಹಕ್ಕೆ ವಿರುದ್ಧವಾಗಿ ನೀವು ನಡೆದುಕೊಳ್ಳುತ್ತಿದ್ದೀರ. ದೇಹದ ಅಂಗಗಳ ಕಾರ್ಯ ನೀವಂದುಕೊಂಡಷ್ಟು ಸುಲಭ ಅಲ್ಲ. ದೇಹದ ಟಾಕ್ಸಿನ್ ಅಂಶ ಇನ್ನೂ ಸ್ವಲ್ಪ ಹೊತ್ತು ದೇಹದಲ್ಲೇ ಇಟ್ಟುಕೊಳ್ಳುವ ನಿಮ್ಮ ನಿರ್ಧಾರದಿಂದ ಸಮಸ್ಯೆ ತಪ್ಪಿದ್ದಲ್ಲ.

ಇನ್ಫೆಕ್ಷನ್
ಯುರಿನರಿ ಟ್ರಾಕ್ ಇನ್ಫೆಕ್ಷನ್ ಬರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು, ಉರಿಯುವುದು, ವಾಸನೆ ಬರುವುದು, ರಕ್ತ ಬರುವುದು ಹೀಗೆ ಮುಂತಾದ ಸಮಸ್ಯೆಗಳು ಬರುತ್ತವೆ.

ಕಿಡ್ನಿ ಸ್ಟೋನ್ಸ್
ಕಿಡ್ನಿ ಸ್ಟೋನ್ಸ್‌ಗೆ ಯೂರಿನ್ ಹೋಲ್ಡ್ ಮಾಡುವುದು ಒಂದೇ ಕಾರಣ ಅಲ್ಲ. ಆದರೆ ಬಹಳ ಸಮಯ ಮೂತ್ರ ವಿಸರ್ಜಿಸದೇ ಇರುವುದರಿಂದ ಕಿಡ್ನಿಯಲ್ಲಿ ಕಲ್ಲುಗಳ ಉತ್ಪಾದನೆ ಆಗಬಹುದು.

10 ಗಂಟೆಗೂ ಹೆಚ್ಚು ಮೂತ್ರ ವಿಸರ್ಜನೆ ಮಾಡದಿರುವುದರಿಂದ ಗಂಭೀರವಾದ ಸಮಸ್ಯೆ ಬರಬಹುದು. ಕೆಲವು ರೇರ್ ಕೇಸ್‌ಗಳಲ್ಲಿ ಬ್ಲಾಡರ್ ಬರ‍್ಸ್ಟ್ ಕೂಡ ಆಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!