Monday, October 2, 2023

Latest Posts

ಹುಬ್ಬಳ್ಳಿ| ಸರ್ವ ಧರ್ಮದ ಸ್ವಯಂ ಸೇವಕ ಸಂಘಟನೆಯ ‌ಪ್ರಥಮ ವಾರ್ಷಿಕೋತ್ಸವ

ಹೊಸದಿಗಂತ ವರದಿ, ಹುಬ್ಬಳ್ಳಿ:

ಗಣರಾಜೋತ್ಸವ ಅಂಗವಾಗಿ ನಗರದ ಸರ್ವ ಧರ್ಮದ ಸ್ವಯಂ ಸೇವಕರ ಸಂಘಟನೆ ತನ್ನ ಮೊದಲನೇ ವಾರ್ಷಿಕಕೋತ್ಸದ ಪ್ರಯುಕ್ತ ದಾಜಿಬಾನ ಪೇಟೆಯ ಪೆಂದಾಳ ಪ್ಯಾಲೆಸ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾಜ ಸೇವಕರಿಗೆ, ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಆನಂದ ದಲಬಂಜನ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಉದ್ಘಾಟಕರಾಗಿ ಹೈಕೋಟ್೯ ವಕೀಲ ಸಂತೋಷ ನರಗುಂದ, ಅಧ್ಯಕ್ಷತೆ ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ನಿವೃತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಧ್ಯಕ್ಷ ಬಿ.ಎಂ ಪಾಟೀಲ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೋಳಿ, ಡಿ. ಗೋವಿಂದರಾವ್, ಮಾರುತಿ ಬಾರಕೇರ, ಗಣಪತಸಾ ಹನಮಸಾಗರ, ದೇವೆಂದ್ರಪ್ಪ ಇಟಗಿ, ಎಸ್.ಎಸ್. ಪಾಟೀಲ, ಈರಣ್ಣ ಎಮ್ಮಿ, ಲಕ್ಷ್ಮಣಸಾ ದಲಬಂಜನ, ಹನುಮಂತಪ್ಪ ಮೇಠಿ, ಶೇಖರಯ್ಯ ಮಠಪತಿ, ಮಂಜುನಾಥ ಲೂತಿಮಠ, ರವಿ ಕದಂ, ರವಿ ಬಿಜವಾಡ, ಕುಬೇರ ಪವಾರ, ಪ್ರಕಾಶ ನಾಯಕ ಭಾಗವಹಿಸುವರು.
ಸಂಘನೆಯ ಕಾರ್ಯದರ್ಶಿ ರಾಜು ಕುಂಬಾರ, ಖಾಜಾಂಚಿ ಕಿರಣ ಇರಕಲ್ ಗೋಪಾಲ ಧಾರವಾಡಕರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!