Monday, March 4, 2024

ಜಗದೀಶ್ ಶೆಟ್ಟರಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಲಾಭ ಆಗಿಲ್ಲ: ನಂಜಯ್ಯನಮಠ

ಹೊಸದಿಗಂತ, ಬಾಗಲಕೋಟೆ:

ಜಗದೀಶ್ ಶೆಟ್ಟರಿಂದ ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಶೂನ್ಯ.‌ ಅವರು ನಮ್ಮ ಪಕ್ಷಕ್ಕೆ ಲಾಭ ಕೊಡಲಿಲ್ಲ ಆದರೆ ಹಾನಿ ಮಾಡಿ ಹೋಗಿದ್ದಾರೆ.‌ ಅವರ ಧೋರಣೆಯನ್ನು ಖಂಡಿಸುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಜಗದೀಶ್ ಶೆಟ್ಟರ್ ಯಾಕೆ ಬಿಜೆಪಿ ಬಿಟ್ಟು ಬಂದಿರಿ, ಬಿಡಲು ಏನ್ ತೊಂದರೆ ಆಗಿತ್ತು. ಆದರೂ ಬಿಜೆಪಿಯಲ್ಲಿ‌ 6 ಬಾರಿ ಶಾಸಕ, ಮಂತ್ರಿ, ರಾಜ್ಯ ಮುಖ್ಯಮಂತ್ರಿಯಾಗಿ ಬಿಜೆಪಿ ಬಿಟ್ಟು ಬರುವ ಅವಶ್ಯಕತೆ ಏನು ಇತ್ತು ಎಂದು ಪ್ರಶ್ನಿಸಿದರು.

ಆರ್ ಎಸ್ ಎಸ್ ನಲ್ಲಿ ಅವರ ಅಪ್ಪ ಇದ್ದರು. ರಾಜಕಾರಣದಲ್ಲಿ 30 ವರ್ಷ ಇದ್ದಾಗಲೂ ಕೂಡ ಅವರ ಮೇಲೆ‌ ಹಗರಣ ಇಲ್ಲ, ಪ್ರಚಾರಕ್ಕೆ ಬರುವ ರಾಜಕಾರಣಿ ಅಲ್ಲ, ಆದರೂ ಬಿಜೆಪಿಯಲ್ಲಿ ಅವರಿಗೆ ಪ್ರಮುಖ ಸ್ಥಾನ ಕೊಟ್ಟರೂ ಬಿಟ್ಟ ಕಾಂಗ್ರೆಸ್ ಗೆ ಬಂದರು.

ಕಾಂಗ್ರೆಸ್ ಗೆ ಅವರ ಕೊಡುಗೆ ಶೂನ್ಯ.‌ ಬಿಜೆಪಿ‌ ಭ್ರಷ್ಟಾಚಾರ, ಆಢಳಿತದ ಬೇಜವಾಬ್ದಾರಿತನದಿಂದ ಹಾಗೂ ಜನ ಬದಲಾವಣೆ ಬಯಸಿದ್ದು, ಐದು ಗ್ಯಾರಂಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಆದರೆ ಶೆಟ್ಟರ್ ಅವರ ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ‌ ಏನೂ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ನಿಂಗಪ್ಪ‌ಹಸ್ತಿ, ಶ್ರೀನಿವಾಸ ಬಳ್ಳಾರಿ, ರಾಜು‌ ಮನ್ನಿಕೇರಿ, ಕುತುಬುದಿನ್‌ಖಾಜಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!