ನಮ್ಮ ಸರ್ಕಾರ ಏನೆಲ್ಲಾ ಮಾಡಿದೆ ? ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಹೈಲೈಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದಾರೆ. ರಾಷ್ಟ್ರಪತಿ ಭಾಷಣದ ಹೈಲೈಟ್ಸ್ ಇಲ್ಲಿದೆ..

  • ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದೆ, ತ್ರಿವಳಿ ತಲಾಖ್ ರದ್ದುಗೊಳಿಸುವ ದೃಢ ನಿರ್ಧಾರ ತೆಗೆದುಕೊಂಡಿದ್ದು ನಮ್ಮ ಸರ್ಕಾರ
  • ಗರೀಬಿ ಹಠಾವೋ ಬರೀ ಘೋಷಣೆಯಲ್ಲ, ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿದೆ.
  • ಹೈ ಸ್ಪೀಡ್ ಸ್ಕಿಲ್ ವರ್ಕ್ ಹಾಗೂ ತಂತ್ರಜ್ಞಾನ ಬಳಕೆಯಿಂದ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ.
  • ಭ್ರಷ್ಟಾಚಾರ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯದ ದೊಡ್ಡ ಶತ್ರು. ಇದಕ್ಕೆ ತಡೆಯಲು ಸರ್ಕಾರ ಕ್ರಮಕೈಗೊಂಡಿದೆ.
  • ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಆಸ್ತಿ ವಶಕ್ಕೆ ಪಡೆಯಲು ಸರ್ಕಾರ ಫ್ಯುಗಿಟಿವ್ ಆರ್ಥಿಕ ಅಪರಾಧಿಗಳ ಕಾಯಿದೆ ಕಾರಿಗೆ ತಂದಿದೆ.
  • ಇಡೀ ಜಗತ್ತೇ ಸಮಸ್ಯೆಗಳ ಇತ್ಯರ್ಥಕ್ಕೆ ಭಾರತದತ್ತ ಮುಖ ಮಾಡುತ್ತಿದೆ.
  • ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ.
  • ಸ್ವಾವಲಂಬಿ ಭಾರತ ನಮ್ಮ ಕನಸು, 2047ರೊಳಗೆ ನಮ್ಮ ಪ್ರಾಚೀನ ಪರಂಪರೆಯ ಹೆಮ್ಮೆ ಜತೆ ಆಧುನಿಕತೆ ಹೊಂದಿದ ದೇಶ ನಮ್ಮದಾಗಬೇಕಿದೆ.
  • ಯಾವುದೇ ವರ್ಗಕ್ಕೂ ಸರ್ಕಾರ ಬೇಧ ತೋರಿಲ್ಲ. ಮೂಲ ಸೌಕರ್ಯಗಳು ಎಲ್ಲರನ್ನೂ ತಲುಪಿದೆ, ತಲುಪುತ್ತಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!