ಬಜೆಟ್ಟಿಗೂ ಮುಂಚಿನ ಆರ್ಥಿಕ ಸಮೀಕ್ಷೆ ಬಿಚ್ಚಿಟ್ಟಿರೋ ಭಾರತದ ಸ್ಥಿತಿ- 7 ಅಂಶಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪ್ರತಿಬಾರಿ ಆಯವ್ಯಯಕ್ಕೆ ಮೊದಲು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಲಾಗುತ್ತದೆ. ಈ ಮೂಲಕ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆಯ ಸ್ಥಿತಿಗತಿ ಏನಿದೆ ಎಂಬುದನ್ನು ತೆರೆದಿಡುತ್ತದೆ.

ಬಜೆಟ್ಟಿಗೆ ಹಣ ಎತ್ತಿಡುವುದಕ್ಕೂ ಮೊದಲು ಸ್ಥಿತಿಗತಿ ತಿಳಿಯಬೇಕಲ್ಲವೇ? 2023ರ ಬಜೆಟ್ ಪೂರ್ವಭಾವಿ ಸಮೀಕ್ಷೆ ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾಗಿದೆ. ಆರ್ಥಿಕ ಸಮೀಕ್ಷೆ ಹೇಳುತ್ತಿರುವ ಪ್ರಮುಖಾಂಶಗಳು ಇಲ್ಲಿವೆ.

  • ಮುಂದಿನ ವಿತ್ತೀಯ ವರ್ಷದಲ್ಲಿ ಭಾರತದ ತ್ವರಿತಗತಿಯ ಪ್ರಗತಿಗೆ ಯಾವುದೇ ಅಡೆತಡೆ ಇಲ್ಲ ಅಂತ ಸಮೀಕ್ಷೆ ಹೇಳಿದೆ.
  • ರುಪಾಯಿಯ ಮೌಲ್ಯ ಕುಸಿತ ಮತ್ತು ಹಣದುಬ್ಬರದ ಸಮಸ್ಯೆಗಳು ಮುಂದುವರಿಯುವ ಎಚ್ಚರಿಕೆಯೂ ಇದೆ.
  • ಭಾರತದ ಜಿಡಿಪಿ ದರ 6 ರಿಂದ 6.8 ಶೇಕಡ ಬೆಳೆಯುವ ನಿರೀಕ್ಷೆ ಇರಿಸಲಾಗಿದೆ. ಮೂರು ವರ್ಷಗಳಲ್ಲಿ ಅತಿ ಕಡಿಮೆ ಬೆಳವಣಿಗೆ ಇದು.
  • ಭಾರತವು ಕೆಲವರ್ಷಗಳಿಂದ ತೆಗೆದುಕೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮ ಇನ್ನಷ್ಟೇ ಗೋಚರವಾಗಬೇಕಿದೆ. ಏಕೆಂದರೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಒಂದರ-ಹಿಂದೊಂದರಂತೆ ನಿರೀಕ್ಷಿಸಿರದ ಆಘಾತಗಳು ಎದುರಾಗಿವೆ.
  • ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಅನ್ನು ರಿಪೇರಿಗೊಳಿಸುವ ಕಾರ್ಯ ಸಂಪನ್ನವಾಗಿರುವುದರಿಂದ ಈ ವಿತ್ತೀಯ ವರ್ಷದಿಂದ ಉದ್ದಿಮೆಗಳಿಗೆ ಸಾಲದ ಹರಿವು ಇನ್ನಷ್ಟು ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳಬಹುದು.
  • ಕೊರೋನೋತ್ತರದ ಭಾರತದ ಪುನಶ್ಚೇತನ ತ್ವರಿತವಾಗಿ ಆಗಿದೆ. ದೇಶದಲ್ಲಿ ವಸ್ತುಸೇವೆಗಳಿಗೆ ಬೇಡಿಕೆ ಮತ್ತು ಹೂಡಿಕೆಗಳೆರಡೂ ಗತಿ ಪಡೆದಿವೆ. ಇನ್ನೊಂದೆಡೆ, ರಫ್ತು ಮಾಡುವುದರಲ್ಲಿ ಸಹ ಭಾರತ ಸ್ಥಿರತೆಯನ್ನು ಸಾಧಿಸಿದೆ.
  • ಸಾರ್ವಜನಿಕರಿಗಾಗಿ ಸರ್ಕಾರ ಮಾಡುತ್ತಿರುವ ವೆಚ್ಚಗಳು ಹೆಚ್ಚಿವೆ. ಉದ್ದಿಮೆ ಮತ್ತು ಬೆಳವಣಿಗೆಗೆ ಸರ್ಕಾರವು ಪೂರಕ ಸ್ಥಿತಿ ನಿರ್ಮಿಸುವ ಸ್ಥಾನದಿಂದ ತಾನು ಸಹಭಾಗಿಯಾಗುವ ಹಂತಕ್ಕೆ ಸರ್ಕಾರ ಹೊಣೆ ಹೆಚ್ಚಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!