Saturday, April 1, 2023

Latest Posts

ನಾನು ಹೇಳಿದ್ದೇ ಬೇರೆ, ಚರ್ಚೆ ಆಗ್ತಾ ಇರೋ ವಿಷಯವೇ ಬೇರೆ, ರೂಪಾ ಮತ್ತೊಂದು ಪೋಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಕಾರ್ಯಕರ್ತ ಗಂಗರಾಜು ಜತೆ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಇದೀಗ ರೂಪಾ ಮೌದ್ಗಿಲ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ನಾನು ಹೋರಾಡುತ್ತಿರೋದು ಬೇರೆ ವಿಷಯಕ್ಕೆ ಆದರೆ ಇಲ್ಲಿ ಚರ್ಚೆಯಾಗ್ತಾ ಇರೋದು ಇನ್ನೊಂದು ವಿಷಯ. ನಾನು ರೋಹಿಣಿ ವಿರುದ್ಧ ಎತ್ತಿರುವ ಭ್ರಷ್ಟಾಚಾರದ ವಿಷಯದ ಬಗ್ಗೆ ಮಾತ್ರ ಗಮನಹರಿಸಿ, ಉಳಿದಿದ್ದು ಬಿಡಿ. ನಾನು ಹೋರಾಡುತ್ತಿರುವುದು ಭ್ರಷ್ಟಾಚಾರದ ವಿರುದ್ಧ, ಅಧಿಕಾರಿಗಳ ಸಂಸಾರಕ್ಕೆ ಕುತ್ತು ತರುವ ವಿಷಯದ ಬಗ್ಗೆಯೂ ಚರ್ಚೆಯಾಗಲಿ.

ನಾನು ನನ್ನ ಗಂಡ ಈಗಲೂ ಒಟ್ಟಿಗೇ ಇದ್ದೀವಿ, ನಮ್ಮ ಕುಟುಂಬ ಉಳಿಸಿಕೊಳ್ಳೋದಕ್ಕೆ ಹೋರಾಡುತ್ತಿದ್ದೇವೆ. ಕುಟುಂಬಕ್ಕೆ ಅಡ್ಡಿಯಾಗೋದನ್ನು ಪ್ರಶ್ನಿಸಬೇಕು, ಒಂದಲ್ಲ, ಸಾಲು ಸಾಲು ಕುಟುಂಬಗಳು ಹಾನಿ ಅನುಭವಿಸುವಂತೆ ಆಗೋದು ಬೇಡ. ನಾನು ಮಾನಸಿಕವಾಗಿ ಸದೃಢಳಾಗಿದ್ದೇನೆ, ಹೋರಾಡುವ ಶಕ್ತಿಯಿದೆ. ನನ್ನ ರೀತಿ ಎಲ್ಲರಿಗೂ ಮಾನಸಿಕ ಶಕ್ತಿ ಇರೋದಿಲ್ಲ, ಅವರ ಕಥೆ ಏನು? ಅಂತಹ ಮಹಿಳೆಯರಿಗೆ ಧ್ವನಿಯಾಗಬೇಕು. ನಮ್ಮ ದೇಶ ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ, ಅದನ್ನು ಮುಂದುವರಿಸೋಣ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!