Thursday, March 23, 2023

Latest Posts

SKIN CARE | ಫೇಸ್ ಸೆರಮ್ ಅಂದ್ರೇನು? ಯಾವ ರೀತಿ ಸ್ಕಿನ್‌ಟೋನ್‌ಗೆ ಯಾವ ಸೆರಮ್ ಒಳ್ಳೆಯದು?

ಸಾಮಾನ್ಯವಾಗಿ ಎಷ್ಟೋ ಮಂದಿ ತಮ್ಮ ಮುಖಕ್ಕೆ ಫೇಸ್ ಸೆರಮ್ ಬಳಕೆ ಮಾಡೊದಿಲ್ಲ, ಇದರಿಂದ ಏನು ಉಪಯೋಗ ಎನ್ನುವ ಮಾಹಿತಿ ಇರೋದಿಲ್ಲ. ಇನ್ನು ಹಲವರಿಗೆ ಸೆರಮ್ ಅಂದ್ರೆ ಏನು ಎನ್ನೋದೆ ತಿಳಿದಿರೋದಿಲ್ಲ. ನಿಮ್ಮ ಚರ್ಮದ ತೊಂದರೆಗಳನ್ನು ಕಡಿಮೆ ಮಾಡೋದಕ್ಕೆ ಸಹಾಯ ಮಾಡೋದೆ ಸೆರಮ್. ಇದು ಹೇಗೆ ಸಹಾಯ ಮಾಡುತ್ತದೆ ನೋಡಿ.. ನೆನಪಿರಲಿ ನಿಮ್ಮ ಚರ್ಮದ ಆರೈಕೆಗಾಗಿ ಒಳಗಿನಿಂದ ಹೇಗೆ ಒಳ್ಳೆ ಆಹಾರ ತೆಗೆದುಕೊಳ್ಳುತ್ತೀರೋ ಅದೇ ರೀತಿ ಹೊರಗಿನಿಂದ ಉತ್ತಮ ಸೆರಮ್ ಬಳಕೆಯೂ ಮುಖ್ಯ..

  • ಸೆರಮ್‌ನಲ್ಲಿರೋ ಕೊಲಾಜೆನ್ ಹಾಗೂ ವಿಟಮಿನ್ ಸಿ ನಿಮ್ಮ ಚರ್ಮದ ಕ್ವಾಲಿಟಿಯನ್ನು ಹೆಚ್ಚಿಸುತ್ತವೆ. ಗಟ್ಟಿಯಾದ ಆರೋಗ್ಯಕರವಾದ ಹಾಗೂ ಯಂಗ್ ಆದ ತ್ಚಚೆ ನಿಮ್ಮದಾಗುತ್ತದೆ.
  • ನೈಸರ್ಗಿಕ ವಸ್ತುಗಳಿರುವ ಸೆರಮ್ ಬಳಕೆಯಿಂದ ಕಲೆಗಳು, ಪಿಂಪಲ್ ಮಾರ್ಕ್ಸ್ ಕಡಿಮೆಯಾಗುತ್ತದೆ.
  • ಓಪನ್ ಪೋರ‍್ಸ್ ಸೈಝ್ ಕಡಿಮೆ ಆಗುತ್ತದೆ, ಕಡಿಮೆ ಬ್ಲ್ಯಾಕ್ ಹಾಗೂ ವೈಟ್ ಹೆಡ್ಸ್ ನಿಮ್ಮದಾಗುತ್ತದೆ.
  • ಅಂಡರ್ ಐ ಸೆರಮ್‌ನಿಂದ ಕಣ್ಣಿನ ಕೆಳಗಿನ ಕಪ್ಪುವರ್ತುಲ, ಫೈನ್ ಲೈನ್ಸ್ ಕಡಿಮೆಯಾಗುತ್ತದೆ.

    ಯಾವ ಸೆರಮ್ ಹಚ್ಚಬೇಕು?

  • ನಿಮ್ಮ ವಯಸ್ಸು 30 ದಾಟಿದ್ದರೆ, ಸ್ಕಿನ್ ಡ್ರೈ ಹಾಗೂ ಪ್ಯಾಚಿ ಆಗಿದ್ದರೆ ವಿಟಮಿನ್ ಸಿ ಸೆರಮ್ ಬಳಸಿ.
  • ಡೀಹೈಡ್ರೇಟೆಡ್ ಹಾಗೂ ಪ್ಯಾಚಿ ಸ್ಕಿನ್ ನಿಮ್ಮದಾಗಿದ್ದರೆ ಹೈಲುರೊನಿಕ್ ಆಸಿಡ್ ಸೆರಮ್ ಬಳಸಿ
  • ರಿಂಕಲ್ಸ್ ಚರ್ಮ ನಿಮ್ಮದಾಗಿದ್ದರೆ ಆಂಟಿಆಕ್ಸಿಡೆಂಟ್ಸ್ ಸೆರಮ್ ಬಳಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!