ಮೇಘನಾ ಶೆಟ್ಟಿ, ಶಿವಮೊಗ್ಗ
ಕಾಲೇಜಿನಲ್ಲೇ ಪರಿಚಯ ಆದ್ರೂ ಯಾವ ಜಗಳವೂ ಇಲ್ಲದೇ, ಇನ್ಸೆಕ್ಯುರಿಟಿ ಇಲ್ಲದೇ ಕಾಲೇಜು ಮುಗಿಯುವವರೆಗೂ ಸಂಬಂಧ ಪೋಷಿಸಿಕೊಂಡು ಬಂದಿದ್ದು ದೊಡ್ಡ ಸಾಧನಯೇ ಹೌದು. ಇಬ್ಬರೂ ಕೆಲಸಕ್ಕೆ ಹೋಗೋಕೆ ಶುರು ಮಾಡಿದ ಮೇಲೆ ಸ್ವಲ್ಪ ಬ್ಯುಸಿಯಾದ್ರು. ಹೊಸ ಹೊಸ ಪರಿಚಯ, ಹೊಸ ಸ್ನೇಹ, ಹೊಸ ಅನುಭವ..
ಆಫೀಸ್‌ನಲ್ಲಿ ಇವನಿಗೆ ‘ಹುಡುಗಿ’ ಇದ್ದಾಳೆ ಅಂತ ಎಲ್ಲರಿಗೂ ಗೊತ್ತಿತ್ತು. ಯಾರ ಜೊತೆಯೂ ತನ್ನ ಪರ್ಸನಲ್ ಲೈಫ್ ಬಗ್ಗೆ ಶೇರ್ ಮಾಡೋ ಹುಡುಗ ಇವನಲ್ಲ, ಹೇಳಿದ್ರೆ ‘ಈಸಿ’ ಆಗ್ಬಿಡ್ತೀನಿ ಅನ್ನೋ ಭಯ, ಹುಡುಗಿ ಇದ್ದಾಳೆ ಮತ್ಯಾರ ಸ್ನೇಹ ಬೇಕು ನಂಗೆ ಅನ್ನೋ ಬುದ್ಧಿ. ಟೀಂ ಜೊತೆ ಸಿಕ್ಕಾಪಟ್ಟೆ ಫ್ರೆಂಡ್ಲಿ ಇದ್ದ ಇನನಿಗೆ ಟೀಂ ಲೀಡರ್ ಸಿಕ್ಕಾಪಟ್ಟೆ ಇಷ್ಟ ಆಗ್ತಿದ್ರು, ನೀವು ನಾವು ಅಂದುಕೊಳ್ಳೋ ಇಷ್ಟ ಅಲ್ಲ, ಅವರ ಟ್ಯಾಲೆಂಟ್, ಮಾತನಾಡೋ ರೀತಿ, ಕೆಲಸದಲ್ಲಿರೋ ಶ್ರದ್ಧೆ ಈ ರೀತಿ ಇಷ್ಟ.
ಇಷ್ಟದಿಂದ ಮಾತು ಶುರುವಾಗ್ತಿತ್ತು, ತನ್ನ ಹುಡುಗಿ ಬಗ್ಗೆ ಮನೆಯವರ ಬಗ್ಗೆ ಖುಷಿ ಖುಷಿಯಿಂದಲೇ ಹೇಳಿಕೊಳ್ತಿದ್ದ. ಹುಡುಗಿ ಜೊತೆ ಜಗಳವಾದ್ರೂ, ಮನೆಯವರ ಜೊತೆ ಮುಖ ಊದಿಸ್ಕೊಂಡಿದ್ರೂ ಇಲ್ಲಿ ಬಂದು ಮಾತನಾಡ್ತಿದ್ದ. ತಪ್ಪೇನಿದೆ? ನಮ್ಮ ಫ್ರಸ್ಟ್ರೇಷನ್ ಹೊರಹಾಕೋಕೆ ಜನ ಬೇಕಲ್ವಾ? ಇಬ್ಬರೂ ಕಷ್ಟಗಳನ್ನು ಶೇರ್ ಮಾಡ್ತಾ ಹತ್ತಿರ ಆದ್ರು.
ಒಬ್ಬರ ಮಾತು ಇನ್ನೊಬ್ಬರಿಗೆ ಪುಳಕ ನೀಡೋಕೆ ಶುರುವಾಯ್ತು. ಆದರೆ ಯಾವುದೇ ದೈಹಿಕ ಸಂಪರ್ಕ ಇಲ್ಲ! ಅವಳ ಮೆಸೇಜ್ ಬಂದ್ರೆ ತಕ್ಷಣ ಓದಿ ಡಿಲೀಟ್ ಮಾಡೋದು, ಅವಳ ಜೊತೆಗಿನ ಗ್ರೂಪ್ ಫೋಟೊಗಳಲ್ಲಿ ಅವಳ ನನ್ನ ಜೋಡಿ ಹೇಗಿದ್ದೀತು ಎಂದು ನೋಡೋದು.. ಇಷ್ಟೆ ಬೇರೇನಿಲ್ಲ! ಇದೇ ಎಮೋಷನಲ್ ಅಫೇರ್!! ಹಿಡಿತವಿಲ್ಲದೇ ಹೋದರೆ ಮುಂದೊಂದು ದಿನ ಫಿಸಿಕಲ್ ಅಫೇರ್ ಆಗಿ ಬದಲಾಗುತ್ತದೆ.
ಕೆಲವರು ಎಮೋಷನಲ್ ಅಫೇರ‍್ಸ್ ಚೀಟಿಂಗ್ ಅಲ್ಲ, ಇದರಿಂದ ಯಾವ ಹಾನಿಯೂ ಇಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರೂ ದೈಹಿಕವಾಗಿಯೋ ಮಾನಸಿಕವಾಗಿಯೋ ಚೀಟಿಂಗ್ ಚೀಟಿಂಗ್ ಅಷ್ಟೆ ಎನ್ನುತ್ತಾರೆ. ಕೆಲವು ಪಾರ್ಟ್‌ನರ್‌ಗಳು ಇದನ್ನು ನಾರ್ಮಲ್ ಆಗಿ ತಗೋತಾರೆ, ಯಾಕಂದ್ರೆ ಅವರು ಕೂಡ ಎಮೋಷನಲ್ ಅಫೇರ್ ಹೊಂದಿರುತ್ತಾರೆ. ಬೇರೆಯವರ ಜೊತೆ ಸ್ವಲ್ಪ ಎಮೋಷನಲ್ ಬಾಂಡ್ ಇರುವುದೂ ತಪ್ಪು ಎಂದು ಭಾವಿಸುವವರಿಗೆ ಇದು ಚೀಟಿಂಗ್, ಅಫೇರ್ ಹಾಗೂ ಮೋಸ ಎಂದು ಅನಿಸುತ್ತದೆ.
ಹಾಗಿದ್ರೆ ಎಮೋಷನಲ್ ಚೀಟಿಂಗ್ ಅಂದ್ರೇನು?
ಯಾವುದೇ ವ್ಯಕ್ತಿ ತನ್ನ ಎಮೋಷನಲ್ ಎನರ್ಜಿಯನ್ನು ತನ್ನ ಪಾರ್ಟ್‌ನರ್ ಅಲ್ಲದೇ ಇನ್ಯಾರದ್ದೋ ಬಳಿ ಇನ್ವೆಸ್ಟ್ ಮಾಡುವುದು, ಅವರಿಂದಲೂ ಇದೇ ರೀತಿಯ ಸಪೋರ್ಟ್, ಸ್ನೇಹ ಇಟ್ಟುಕೊಳ್ಳುವುದು. ನಿಮ್ಮ ಪಾರ್ಟ್‌ನರ್ ನಿಮ್ಮ ಜೊತೆ ಎಮೋಷನಲ್ ಮಾತುಕತೆ ಕಡಿಮೆ ಮಾಡುತ್ತಿದ್ದಾರೆ ಎಂದರೆ ಅವರು ಇನ್ಯಾರದ್ದೋ ಬಳಿ ಶೇರ್ ಮಾಡುತ್ತಿದ್ದಾರೆ ಎಂದರ್ಥ.
ನಿಮ್ಮ ಎಮೋಷನಲ್ ಸಪೋರ್ಟ್ ಇದನ್ನು ಮೀರಿದ್ರೆ ಆ ಸ್ನೇಹಕ್ಕೆ ಇಂದೇ ಬ್ರೇಕ್ ಹಾಕಿ..
ಅವರ ಜೊತೆ ಒಬ್ಬರೇ ಸಮಯ ಕಳೆಯಬೇಕು ಎಂದು ಅನಿಸಿದರೆ
ನಿಮ್ಮ ಗಂಡ/ಬಾಯ್‌ಫ್ರೆಂಡ್/ಹೆಂಡತಿ/ ಗರ್ಲ್‌ಫ್ರೆಂಡ್ ಗಿಂತ ಅವರೇ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎನಿಸುತ್ತಿದ್ದರೆ
ನಿಮ್ಮ ಗಂಡ/ಬಾಯ್‌ಫ್ರೆಂಡ್/ ಹೆಂಡತಿ/ ಗರ್ಲ್‌ಫ್ರೆಂಡ್ ಜೊತೆ ಹೆಚ್ಚಿನ ಸಮಯ ಕಳೆಯಲು ಇಷ್ಟವಿಲ್ಲ, ಆಗುತ್ತಿಲ್ಲ ಎಂದಾದರೆ
ಅವನಿಗೆ/ಅವಳಿಗೆ ಪರ್ಸನಲ್ ಆದಂತಹ ಗಿಫ್ಟ್‌ಗಳನ್ನು ನೀಡುತ್ತಿದ್ದರೆ
ನಿಮ್ಮ ಸ್ನೇಹದ ಬಗ್ಗೆ ಪಾರ್ಟ್‌ನರ್ ಬಳಿ ಮುಚ್ಚಿಡುತ್ತಿದ್ದರೆ
ನಿಮ್ಮ ಪಾರ್ಟ್‌ನರ್ ಜೊತೆ ಇಂಟಿಮೆಸಿ ಇಷ್ಟವಾಗದಿದ್ದರೆ
ನಿಮ್ಮ ಸ್ನೇಹಿತ/ಸ್ನೇಹಿತೆ ಜೊತೆ ಇಂಟಿಮೇಟ್ ಆಗುವ ರೀತಿ ಕನಸುಗಳು ಬಿದ್ದರೆ
ನಿಮ್ಮ ಸಮಸ್ಯೆಗಳು, ಪಾರ್ಟ್‌ನರ್ ಜೊತೆಗಿನ ಸಮಸ್ಯೆಗಳನ್ನು ನೀವು ಇನ್ನೊಬ್ಬರ ಜೊತೆ ಹಂಚಿಕೊಳ್ಳುತ್ತಿದ್ದರೆ
ಯಾರಾದರೂ ಚೀಟಿಂಗ್ ಮಾಡುತ್ತಿದ್ದೀರಾ ಎಂದರೆ ಕಾನ್ಫಿಡೆನ್ಸ್ ಇಲ್ಲದೆ ನಾವು ಬರೀ ಸ್ನೇಹಿತರು ಎಂದು ಹೇಳುತ್ತಿದ್ದರೆ.
ನಿಮ್ಮಲ್ಲೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ? ಇದಕ್ಕೆ ಉತ್ತರ ಹೌದು ಎಂದಾದರೆ ಅದು ಎಮೋಷನಲ್ ಚೀಟಿಂಗ್..
ಮದುವೆ ಮಾಡಿಕೊಳ್ಳಬಾರದಿತ್ತು ಎಂದು ಅನಿಸಿದ್ಯಾ?
ಮಾನಸಿಕವಾಗಿ ನಿಮ್ಮ ಪಾರ್ಟ್‌ನರ್‌ನಿಂದ ದೂರ ಇದ್ದೀರಾ?
ನಿಮ್ಮ ಪಾರ್ಟ್‌ನರ್ ಬಳಿ ಮಾತನಾಡೋದು, ಏನನ್ನಾದರೂ ಅರ್ಥಮಾಡಿಸೋದು ಕಷ್ಟ ಎನಿಸುತ್ತಿದ್ಯಾ?
ಗಂಡ/ಬಾಯ್‌ಫ್ರೆಂಡ್/ ಹೆಂಡತಿ/ ಗರ್ಲ್‌ಫ್ರೆಂಡ್ ಗಿಂತ ಹೆಚ್ಚು ಸಮಯ ಅವರಿಗೆ ನೀಡ್ತಿದ್ದೀರಾ?
ಆ ಸ್ನೇಹದ ಕಡೆ ಸೆಕ್ಸ್ ಬಗ್ಗೆ ಆಸಕ್ತಿ ಹೊಂದಿದ್ದೀರಾ?
ನಿಮ್ಮ ಸ್ನೇಹ ಎಷ್ಟು ಡೀಪ್ ಆಗಿದೆ ಎಂದು ಪಾರ್ಟ್‌ನರ್‌ಗೆ ಗೊತ್ತಿದ್ಯಾ?
ನಿಮ್ಮ ಸ್ನೇಹದ ಬಗ್ಗೆ ಪಾರ್ಟ್‌ನರ್ ಬಳಿ ಮುಚ್ಚಿಡ್ತಿದ್ದೀರಾ?
ನೀವು ಚೀಟಿಂಗ್ ಮಾಡುತ್ತಿದ್ದೀರಿ ಅಥವಾ ಇಲ್ಲವಾ ಎಂದು ಜಡ್ಜ್ ಮಾಡುವುದಿಲ್ಲ, ನಿಮ್ಮ ಸಂಬಂಧದ ಬಗ್ಗೆ ನಿಮಗಿರುವಷ್ಟು ಕ್ಲಾರಿಟಿ ಇನ್ಯಾರಿಗೂ ಇರೋದಿಲ್ಲ. ಏನೇ ಆದರೂ ಮುಕ್ತವಾಗಿ ಮಾತನಾಡಿ. ಸಮಸ್ಯೆ ಸರಿಹೋಗುತ್ತಿಲ್ಲ ಎಂದರೆ ಮ್ಯಾರೇಜ್ ಕೌನ್ಸೆಲರ್‌ಗಳನ್ನು ಭೇಟಿ ಮಾಡಿ.