HEALTH: ಆಟಿಸಂ ಎಂದರೇನು? ಮಕ್ಕಳಲ್ಲಿ ಕಾಣುವ ಈ ಸಮಸ್ಯೆಯ ಲಕ್ಷಣಗಳೇನು?

ಆಟಿಸಂ( Autism spectrum disorder) ಬಗ್ಗೆ ಎಷ್ಟು ಜನರಿಗೆ ಗೊತ್ತು? ಮೊದಲ ಎರಡು ವರ್ಷ ಮಕ್ಕಳ ಆಟಪಾಠಗಳಿಗೂ ಆಟಿಸಂ ಲಕ್ಷಣಗಳಿಗೂ ವ್ಯತ್ಯಾಸ ತಿಳಿಯುವುದೇ ಕಷ್ಟ. ಕೆಲ ಮಕ್ಕಳು ಕೈಯನ್ನೇ ಆಟಿಕೆಯಾಗಿ ಬಳಸುತ್ತಾರೆ. ಆದರೆ ಕೈ ಜೊತೆ ಆಟ ಆಡುವುದು, ಕೈಯನ್ನೇ ನೋಡುವುದು ಆಟಿಸಂನ ಲಕ್ಷಣವೂ ಹೌದು. ಇನ್ನು ಮಗು ಮುಖ ನೋಡಿ ನಗೋದಿಲ್ಲ ಎಂದಾದರೆ, ಅವರಪ್ಪನೂ ಹೀಗೆ ಸಣ್ಣವನಿದ್ದಾಗ ಕೋಪದ ಮುಖದಲ್ಲೇ ಇರುತ್ತಿದ್ದ ಎಂದು ನಿರ್ಲಕ್ಷ್ಯ ಮಾಡಿಬಿಡುತ್ತೇವೆ.

Autism Spectrum Disorder | Children's Healthcare of Atlanta ಸಾವಿರಕ್ಕೆ ಒಂದೋ ಎರಡೋ ಮಕ್ಕಳು ಆಟಿಸಂ ಸಮಸ್ಯೆಯನ್ನು ಎದುರಿಸುತ್ತಾರೆ. ನರಮಂಡಲದ ಬೆಳವಣಿಗೆಯಲ್ಲಿ ನ್ಯೂನತೆ, ಸಾಮಾಜಿಕ ನಡವಳಿಕೆ ಹಾಗೂ ಸಂವಹನದ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ. ಗಂಡು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ.

What Causes Autism In Children? 6 Facts You Need to Knowಆಟಿಸಂ ಸಮಸ್ಯೆಯಿರುವ ಮಕ್ಕಳು ಇತರ ಮಕ್ಕಳಿಗಿಂತ ವಿಭಿನ್ನವಾಗಿರುತ್ತಾರೆ. ಅವರ ನಡವಳಿಕೆ ಭಿನ್ನವಾಗಿದ್ದು, ಅವರನ್ನು ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಆಟಿಸಂ ಮಕ್ಕಳ ಜೀವನದ ಕೊನೆಯಲ್ಲ, ಆಟಿಸಂ ಸಮಸ್ಯೆ ಇದ್ದೂ ಆರಾಮಾಗಿಯೇ ಇರುವವರೂ ಇದ್ದಾರೆ. ಆಟಿಸಂ ಸಮಸ್ಯೆ ಇರುವ ಮಕ್ಕಳನ್ನು ಹೊಂದಿದ ಪೋಷಕರಿಗೂ ಆತ್ಮಸ್ಥೈರ್ಯದ ಅವಶ್ಯಕತೆ ಇದೆ.

Challenging behaviour & autism: 3-18 years | Raising Children Networkಈ ಮಕ್ಕಳಿಗೆ ಸಾಮಾಜಿಕ, ಭಾವನಾತ್ಮಕ ಗ್ರಹಿಕೆ ಇರುವುದಿಲ್ಲ. ಇವರ ಸಮಾರ್ಥ್ಯ ಭಿನ್ನವಾದ್ದು, ಮಕ್ಕಳಿಗೆ ಆಟಿಸಂ ಇದೆ ಎಂದು ಗುರುತಿಸುವಲ್ಲಿ ಹಲವು ಪೋಷಕರು ಎಡವುತ್ತಾರೆ. ಮಗು ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಇರುವುದು ಆಟಿಸಂನ ಲಕ್ಷಣ ಆದರೆ ಪೋಷಕರು, ಮಗು ಸುಮ್ಮನೆ ಹಾಗು ಮಾಡುತ್ತದೆ. ದೊಡ್ಡವರಾದಂತೆ ಸರಿಯಾಗುತ್ತದೆ ಎಂದು ಸಮಾಧಾನಿಸಿಕೊಳ್ಳುತ್ತಾರೆ. ಆಟಿಸಂ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ..

Children with autism have creative strengths! Know how to harness it |  HealthShotsಆಟಿಸಂನ ಲಕ್ಷಣಗಳಿವು..

  • ಅವರ ಹೆಸರು ಕೂಗಿದರೂ ತಿರುಗಿ ನೋಡದೇ ಇರುವುದು
  • ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಿರಾಕರಿಸುವುದು
  • ನೀವು ನಗಿಸಿದಾಗ ನಗದೇ ಇರುವುದು
  • ಅವರಿಗೆ ಹಿಡಿಸದ ಶಬ್ದ, ವಾಸನೆ ಅಥವಾ ಆಹಾರ ಕಂಡಾಗ ಸಿಕ್ಕಾಪಟ್ಟೆ ಕಿರಿಕಿರಿ ಮಾಡುವುದು
  • ಮಾಡಿದ್ದನ್ನೇ ಮಾಡುವುದು, ಕೈಯಿಂದ ಚಪ್ಪಾಳೆ ತಟ್ಟುತ್ತಲೇ ಇರುವುದು, ಅಲ್ಲಾಡುತ್ತಲೇ ಇರುವುದು.
  • ಹೇಳಿದ್ದನ್ನೇ ಹೇಳುವುದು, ಒಂದೇ ಪದವನ್ನು ಮತ್ತೆ ಮತ್ತೆ ಹೇಳುವುದು
  • ಬೇರೆ ಮಕ್ಕಳಷ್ಟು ಆಕ್ಟೀವ್ ಆಗಿಲ್ಲದೇ ಇರುವುದು, ಮಾತನಾಡದೇ ಇರುವುದು
  • ಅಪ್ಪಿಕೊಳ್ಳುವುದನ್ನು ಇಷ್ಟಪಡದೇ ಇರುವುದು
  • ಆಟಸಾಮಾನುಗಳನ್ನು ಬಿಟ್ಟು, ಬೇರೆ ಯಾವುದೋ ವಸ್ತು ಮೇಲೆ ಆಸಕ್ತಿ ಹೊಂದುವುದು.
  • ವಸ್ತುಗಳನ್ನು ಮುಖದ ಬಳಿ ತಂದರೂ ಕೈಯಿಂದ ಹಿಡಿಯದೇ ಇರುವುದು
  • ತಂತಾನೇ ನಗದಿರುವುದು
  • ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವಾಗುವುದು
  • ಸಾಮಾಜಿಕ ಸನ್ನಿವೇಶಗಳನ್ನು ಇಷ್ಟಪಡದಿರುವುದು
  • ಸ್ನೇಹಿತರನ್ನು ಮಾಡಿಕೊಳ್ಳದೇ ಇರುವುದು

Signs of Autism in a 4-Year-Old: Spectrum, Diagnosis & Moreಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!