ಎರಡು ಬಾರಿ ಎಮ್ಮಿ‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಹಾಲಿವುಡ್ ನಟಿ ಆ್ಯಲೆ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ತಮ್ಮ‌ ಅಪೂರ್ವ ನಟನೆಯ ಮೂಲಕ ಗಮನಸೆಳೆದಿದ್ದ ಈ ನಟಿ ಕಳೆದ ಕೆಲವು ಸಮಯಗಳಿಂದ ಆರೋಗ್ಯ ಸಮಸ್ಯೆಯಲ್ಲಿ ಬಳಲುತ್ತಿದ್ದರು.

ಆ್ಯಲೆ ಎರಡು ಬಾರಿ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಎನ್‌ಬಿಸಿ ಸಿಟ್‌ಕಾಮ್ ‘ಚೀರ್ಸ್’ ನಲ್ಲಿನ ರೆಬೆಕ್ಕಾ ಹೋವ್ ಪಾತ್ರಲ್ಲಾಗಿ 1991ರಲ್ಲಿ ಎಮ್ಮಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಗೆ ಆ್ಯಲೆ ಅವರದ್ದು.

1980 ಮತ್ತು 1990 ರ ದಶಕಗಳಲ್ಲಿ ಹಾಲಿವುಡ್ ನಲ್ಲಿ ಸಕ್ರೀಯರಾಗಿದ್ದ ಅಲ್ಲೆ, ‘ಲುಕ್ ಹೂಸ್ ಟಾಕಿಂಗ್’, ‘ಇಟ್ ಟೇಕ್ಸ್ ಟು’, ‘ಡಿಕನ್ಸ್ಟ್ರಕ್ಟಿಂಗ್ ಹೆನ್ರಿ’ ಮತ್ತು ‘ಡ್ರಾಪ್ ಡೆಡ್ ಗಾರ್ಜಿಯಸ್’ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ದೂರದರ್ಶನದಲ್ಲೂ ಸಕ್ರೀಯರಾಗಿದ್ದ ಅವರು 1994 ರಲ್ಲಿ ‘ಡೇವಿಡ್ಸ್ ಮದರ್’ ಗಾಗಿ ಎರಡನೇ ಬಾರಿಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಪಡೆದಿದ್ದರು.

ಈ ನಡುವೆ ಆ್ಯಲೆ ಅವರನ್ನು ಕ್ಯಾನ್ಸರ್‌ ಇನ್ನಿಲ್ಲದಂತೆ ಕಾಡಿತ್ತು. ಅದಕ್ಕಾಗಿ ಅವರು ಫ್ಲೋರಿಡಾದ ಮೊಫಿಟ್ ಕ್ಯಾನ್ಸರ್ ಸೆಂಟರ್‌ನಲ್ಲಿ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!