April 19, 2026
Sunday, April 19, 2026
spot_img

Beauty Sleep ಅಂದ್ರೇನು? ಇದ್ರಿಂದ ನಮಗೆ ಏನ್ ಹೆಲ್ಪ್ ಆಗುತ್ತೆ?

“Beauty Sleep” ಅನ್ನೋ ಪದ ನಾವು ಕೇಳಿರ್ತೀವಿ… ಆದರೆ ಅದು ಕೇವಲ ಮಾತಲ್ಲ, ನಿಜವಾಗಿಯೂ ನಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಮಹತ್ವವಾದದ್ದು. ರಾತ್ರಿ ಸರಿಯಾದ ನಿದ್ರೆ ತೆಗೆದುಕೊಳ್ಳೋದು ನಿಮ್ಮ ಮುಖದ ಗ್ಲೋದಿಂದ ಹಿಡಿದು ಮನಸ್ಸಿನ ಶಾಂತಿಯವರೆಗೂ ಪರಿಣಾಮ ಬೀರುತ್ತೆ.

Skin Repair ಆಗೋ ಸಮಯ
ರಾತ್ರಿ ನಾವು ನಿದ್ರೆ ಮಾಡುವಾಗ ನಮ್ಮ ಚರ್ಮದಲ್ಲಿ ಸೆಲ್‌ ರಿಪೇರ್ ಪ್ರಕ್ರಿಯೆ ನಡೆಯುತ್ತದೆ. ಡ್ಯಾಮೇಜ್ ಆದ ಸ್ಕಿನ್ ಸೆಲ್‌ಗಳು ರಿಪೇರ್ ಆಗಿ ಹೊಸ ಸೆಲ್‌ಗಳು ಹುಟ್ಟುತ್ತವೆ. ಇದರಿಂದ ಮುಖದಲ್ಲಿ ನೈಸರ್ಗಿಕ ಗ್ಲೋ ಬರುತ್ತದೆ.

Dark Circles ಕಡಿಮೆಯಾಗುತ್ತವೆ
ನಿದ್ರೆ ಕಡಿಮೆ ಆದ್ರೆ ಕಣ್ಣಿನ ಕೆಳಗೆ ಕಪ್ಪು ವಲಯಗಳು ಬರುತ್ತವೆ. ಸರಿಯಾಗಿ 7-8 ಗಂಟೆ ನಿದ್ರೆ ಮಾಡಿದರೆ ಈ ಸಮಸ್ಯೆ ಕಡಿಮೆಯಾಗುತ್ತದೆ, ಮುಖ ಫ್ರೆಶ್ ಆಗಿ ಕಾಣುತ್ತದೆ.

Stress ಕಡಿಮೆ – Mind Fresh
ಒಳ್ಳೆಯ ನಿದ್ರೆ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ಟ್ರೆಸ್ ಕಡಿಮೆ ಆದ್ರೆ ಮುಖದಲ್ಲೂ ಟೆನ್ಶನ್ ಕಡಿಮೆಯಾಗುತ್ತದೆ ಅದು ನಿಮ್ಮ ಸೌಂದರ್ಯಕ್ಕೆ ಸಹಾಯ ಮಾಡುತ್ತದೆ.

Hair Healthಗೂ ಸಹಾಯ
ನಿದ್ರೆ ಸಮಯದಲ್ಲಿ ಹಾರ್ಮೋನ್‌ಗಳು ಬ್ಯಾಲೆನ್ಸ್ ಆಗುತ್ತವೆ. ಇದರಿಂದ ಕೂದಲು ಉದುರುವಿಕೆ ಕಡಿಮೆ ಆಗಿ, ಕೂದಲು ಆರೋಗ್ಯಕರವಾಗುತ್ತದೆ.

Weight Controlಗೆ ಸಹಾಯ
ಸರಿಯಾದ ನಿದ್ರೆ ಇಲ್ಲದಿದ್ದರೆ ಹಾರ್ಮೋನ್ imbalance ಆಗಿ ಹಸಿವು ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಾಗಬಹುದು. Beauty sleep weight lossಗೂ ಸಹಾಯ ಮಾಡುತ್ತದೆ.

ಬ್ಯೂಟಿ ಸ್ಲೀಪ್ ಟಿಪ್ಸ್:

  • ಪ್ರತಿದಿನ 7-8 ಗಂಟೆ ನಿದ್ರೆ ಮಾಡಬೇಕು
  • ಮಲಗೋ ಮೊದಲು ಫೋನ್/ಸ್ಕ್ರೀನ್ avoid ಮಾಡಿ
  • ಮುಖ ಕ್ಲೀನ್ ಮಾಡಿಕೊಂಡು ಮಲಗಿ
  • ಲೈಟ್, ಕೂಲ್ ವಾತಾವರಣದಲ್ಲಿ ನಿದ್ರೆ ಮಾಡೋದು ಉತ್ತಮ

ಸಣ್ಣದಾಗಿ ಹೇಳ್ಬೇಕಂದ್ರೆ, ದುಬಾರಿ ಕ್ರೀಮ್‌ಗಿಂತ ಒಳ್ಳೆಯ ನಿದ್ರೆನೇ ನಿಮ್ಮ best beauty secret!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !