ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದು ನಮ್ಮೆಲ್ಲರ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಜನಸಾಮಾನ್ಯರು ತಮ್ಮ ಜನ್ಮದಿನದಂದು ದೇವಸ್ಥಾನಕ್ಕೆ ಹೋಗಿ, ಸ್ನೇಹಿತರನ್ನು ಮೀಟ್ ಮಾಡೋದು ಅಥವಾ ಫ್ಯಾಮಿಲಿ ಜೊತೆಗೆ ಹೊರಗೆ ಹೋಗೋದು ಕಾಮನ್. ಆದರೆ ಒಬ್ಬ ಪ್ರಧಾನಿ ತಮ್ಮ ಜನ್ಮದಿನವನ್ನು ಹೇಗೆ ಆಚರಿಸುತ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದದ್ದೆ! ಇದಕ್ಕೆ ಉತ್ತರ ಇಲ್ಲಿದೆ..
ಪ್ರಧಾನಿ ಮೋದಿ ತಮ್ಮ ಜನ್ಮ ದಿನದಂದು ತಮಗೆ ಇಷ್ಟವಿರುವ ಕೆಲಸವನ್ನು ಮಾಡ್ತಿದ್ದಾರೆ. ಜನಸೇವೆ, ದೇಶಸೇವೆ! ಹೌದು, ಇಂದು ಪ್ರಧಾನಿ ಮೋದಿ ಮೂರು ಟೆಕ್ ಮೇಳಗಳನ್ನು ಉದ್ಘಾಟನೆ ಮಾಡಲಿದ್ದಾರೆ. ನವದೆಹಲಿಯಲ್ಲಿರುವ ಯಶೋಭೂಮಿಯಲ್ಲಿ ಸೆಮಿಕಾನ್ ಇಂಡಿಯಾ 2026 ನ 5ನೇ ಆವೃತ್ತಿಯನ್ನು ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ. ಮೂರು ದಿನಗಳ ಈ ಸಮ್ಮೇಳನದಲ್ಲಿ ಸೆಮಿಕಂಡಕ್ಟರ್ ಕಂಪನಿಗಳು, ನೀತಿ ಹೂಡಿಕೆದಾರರು, ಸಂಶೋಧಕರು, ಸ್ಟಾರ್ಟ್‌ಅಪ್ ಆಲೀಕರು ಆಗಮಿಸಲಿದ್ದಾರೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ , ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಜಾಗತಿಕ ಉದ್ಯಮ ಸಂಘವಾದ ಸೆಮಿ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆ ಪ್ರತಿನಿಧಿಸುತ್ತದೆ ಮತ್ತು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ.
ಥೀಮ್ ಏನು?
“Silicon to Systems: Building the Ecosystem” ಎನ್ನುವ ಥೀಮ್‌ನಲ್ಲಿ ಈ ಬಾರಿಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 15,000 ಚದರ ಮೀಟರ್ ಪ್ರದರ್ಶನ ಸ್ಥಳದಲ್ಲಿ ಸುಮಾರು 300 ಅಂತಾರಾಷ್ಟ್ರೀಯ ಕಂಪನಿಗಳು ಸೇರಿದಂತೆ 600ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಾದ್ಯಂತ ಪ್ರಮುಖ ಬೆಳವಣಿಗೆಗಳು ಮತ್ತು ಸವಾಲುಗಳನ್ನು ಒಳಗೊಂಡ ಚರ್ಚೆಗಳಲ್ಲಿ 150ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುವ ನಿರೀಕ್ಷೆಯಿದೆ.
ಕಾಂಪಿಟೇಷನ್ ಇದೆ
ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್‌ಅಪ್ ಪಿಚ್, ವಿದ್ಯಾರ್ಥಿ ಹ್ಯಾಕತಾನ್ ಹಾಗೂ ನಾವೀನ್ಯತೆ ಪ್ರದರ್ಶನ, ಕಾಂಪಿಟೇಷನ್ ಇರಲಿದೆ. ತಮ್ಮ ಕಂಪನಿಯಲ್ಲಿ ಪೊಟೆಂಶಿಯಲ್, ಕ್ರಿಯೇಟಿವಿಟಿ ಎಲ್ಲವೂ ಇದೆ ಆದರೆ ಹಣದ ಕೊರತೆ ಇದೆ ಎನ್ನುವವರು ಈ ವೇದಿಕೆಯನ್ನು ಉಪಯೋಗಿಸಬಹುದಾಗಿದೆ. ಸಮ್ಮೇಳನದ ಕಾರ್ಯಕ್ರಮದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ಸುಧಾರಿತ ಪ್ಯಾಕೇಜಿಂಗ್, ವಸ್ತುಗಳು ಮತ್ತು ಉಪಕರಣಗಳು, ಚಿಪ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟ್-ಅಪ್‌ಗಳು, ನಾವೀನ್ಯತೆ ಮತ್ತು ಪ್ರತಿಭಾ ಅಭಿವೃದ್ಧಿಯ ಕುರಿತು ಮುಖ್ಯ ಭಾಷಣಗಳು, ಪ್ಯಾನಲ್ ಚರ್ಚೆಗಳು ನಡೆಯಲಿವೆ.



