ಕಾಂತಾರ ನೋಡಿದ್ರಾ ಎಂಬ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ವಿಶ್ವದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಯನ್ನೇ ಬರೆಯುತ್ತಿದೆ.

ಇನ್ನು ಸಿನಿಮಾ ನೋಡಿದ ಪರಭಾಷಾ ನಟರು ನಟಿಯರು ರಿಷಬ್ ಶೆಟ್ಟಿ ಅವರಿಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.ರಜನಿಕಾಂತ್, ಪ್ರಭಾಸ್, ಅನುಷ್ಕಾ ಶೆಟ್ಟಿ ಮೊದಲಾದವರು ಸಿನಿಮಾವನ್ನು ಕೊಂಡಾಡಿದ್ದಾರೆ.

ಇದೀಗ ರಿಷಬ್ ಶೆಟ್ಟಿ ಅವರ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಮಂದಣ್ಣ ನೆಟ್ಟಿಗರ ಬಾಯಿಗೆ ತುತ್ತಾಗಿದ್ದಾರೆ. ಮುಂಬೈನಲ್ಲಿ ಪತ್ರಕರ್ತರು ಕಾಂತಾರ ನೋಡಿದ್ರ ಎಂದು ಪ್ರಶ್ನಿಸಿದ ವೇಳೆ, ನಾನು ಇನ್ನೂ ಸಿನಿಮಾ ನೋಡಿಲ್ಲ. ಬೆಂಗಳೂರಿಗೆ ಹೋದ ಬಳಿಕ ನೋಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಈ ಮಾತು ನೆಟ್ಟಿಗರನ್ನು ಕೆರಳಿಸಿದ್ದು, ಚಿತ್ರರಂಗಕ್ಕೆ ಕಾಲಿಡಲು ಕಾರಣಕರ್ತರಾಗಿದ್ದೇ ರಿಷಬ್ ಶೆಟ್ಟಿ. ಅವರ ಕಾಂತಾರಾ ಚಿತ್ರವನ್ನು ಇಡೀ ಭಾರತೀಯ ಚಿತ್ರರಂಗವೇ ಮೆಚ್ಚಿ ಕೊಂಡಾಡುತ್ತಿದೆ. ಇದರ ಮಧ್ಯೆ ನೀವು ಇನ್ನೂ ಚಿತ್ರ ವೀಕ್ಷಿಸಿಲ್ಲ ಎಂಬ ಉತ್ತರ ನೀಡಿದ್ದೀರಿ ಎಂದು ರಶ್ಮಿಕಾ ಮಂದಣ್ಣ ವಿರುದ್ಧ ಕಿಡಿ ಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!