ಟೇಸ್ಟಿ ಟೇಸ್ಟಿ ಮಶ್ರೂಮ್‌ ಫ್ರೈ: ಒಮ್ಮೆ ತಿಂದ್ರೆ ಪದೇ ಪದೇ ಬೇಕು ಅಂತೀರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿಗಳು :

ಅಣಬೆ
ಈರುಳ್ಳಿ – 3
ಹಸಿಮೆಣಸಿನಕಾಯಿ – 4
ಶುಂಠಿ, ಬೆಳ್ಳುಳ್ಲಿ ಪೇಸ್ಟ್ – 1 ಚಮಚ
ಕೊತ್ತಂಬರಿ ಪುಡಿ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಖಾರದ ಪುಡಿ – 1 ಚಮಚ
ಉಪ್ಪು – ರುಚಿಗೆ
ಅರಿಶಿನ – ಚಿಟಿಕೆ
ಎಣ್ಣೆ – ಸಾಕಷ್ಟು
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

ಅಣಬೆಗಳನ್ನು ಮಣ್ಣಿಲ್ಲದಂತೆ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಸ್ವಚ್ಛಗೊಳಿಸಿದ ಅಣಬೆಗಳನ್ನು ನಿಮಗೆ ಇಷ್ಟವಾದಂತೆ ಕತ್ತರಿಸಿ, ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅಣಬೆ ಪೀಸ್ ಮುಳುಗುವವರೆಗೆ ನೀರನ್ನು ಸುರಿದು ಒಲೆಯ ಮೇಲಿರಿಸಿ. ಇದಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಅದು ಎರಡು ಕುದಿ ಬರುವವರೆಗೆ ಬೇಯಿಸಿ ನಂತರ ನೀರಿನಿಂದ ಅಣಬೆಗಳನ್ನು ತೆಗೆಯಿರಿ. ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.

ಸ್ಟವ್ ಆನ್ ಮಾಡಿ ಬಾಣಲೆ ಇಟ್ಟು ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಐದು ನಿಮಿಷಗಳ ನಂತರ ಬೇಯಿಸಿದ ಅಣಬೆಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಬೇಕಾದಷ್ಟು ಉಪ್ಪು, ಖಾರದ ಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡುತ್ತಿರಿ.

ಈ ಎಲ್ಲಾ ಮಸಾಲ ಅಣಬೆಗಳಿಗೆ ಹಿಡಿದ ನಂತರ, ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಸ್ಟವ್ ಆಫ್ ಮಾಡಿ ಅಷ್ಟೇ….ಟೇಸ್ಟಿ ಮಶ್ರೂಮ್ ಫ್ರೈ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!