ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿಕೆ ಇದೀಗ ಭಾರತದ ಕೋಲಾಹಲ ಸೃಷ್ಟಿಸಿವೆ. ಇದೀಗ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸ್ಪಷ್ಟನೆ ನೀಡಿದ್ದಾರೆ.
ನನ್ನ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ನಾನು ಅವರಿಗೆ ಕರೆ ಮಾಡಿಲ್ಲ, ಭೇಟಿನೂ ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನು ಮಾಧ್ಯಮಗಳ ಒಂದು ವಿಭಾಗದಲ್ಲಿ ಸುಳ್ಳಿನ ಕಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2002ರಿಂದ 2010ರ ಅವಧಿಯಲ್ಲಿ ತಾನು 5 ಭಾರಿ ಭಾರತಕ್ಕೆ ಹೋಗಿದ್ದು ಅಲ್ಲಿನ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿ ಪಾಕ್ ಗೂಢಾಚಾರ ಸಂಸ್ಥೆ ಐಎಸ್‌ಐಗೆ ರವಾನಿಸಿದ್ದಾಗಿ ಪಾಕ್ ಪತ್ರಕರ್ತ ಹೇಳಿಕೊಂಡಿದ್ದನು.
ಇದೀಗ ಇದಕ್ಕೆ ಸ್ಪಷ್ಟನೆ ನೀಡಿದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಉಪರಾಷ್ಟ್ರಪತಿಯವರು ವಿದೇಶಿ ಅತಿಥಿಗಳನ್ನ ಆಹ್ವಾನಿಸುವ ಪ್ರಕ್ರಿಯೆಯು ಸರ್ಕಾರದ ಸಲಹೆಯ ಮೇರೆಗೆ ನಡೆಯುತ್ತದೆ ಮತ್ತು ಮುಖ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. ನಾನು ಈ ವ್ಯಕ್ತಿಯನ್ನು ಎಂದಿಗೂ ಆಹ್ವಾನಿಸಿಲ್ಲ ಅಥವಾ ಭೇಟಿಯಾಗಿಲ್ಲ ಎಂದು ಅನ್ಸಾರಿ ಹೇಳಿದರು.
ನಾನು 11 ಡಿಸೆಂಬರ್ 2010 ರಂದು ಭಯೋತ್ಪಾದನೆ ಕುರಿತ ಸಮಾವೇಶವನ್ನ ಉದ್ಘಾಟಿಸಿದ್ದೆ. ಸಾಮಾನ್ಯ ಅಭ್ಯಾಸದಂತೆ, ಅತಿಥಿ ಪಟ್ಟಿಯನ್ನು ಸಂಘಟಕರು ಸಿದ್ಧಪಡಿಸಿದ್ದಾರೆ. ನಾನು ಅವನನ್ನ ಕರೆದಿಲ್ಲ ಅಥವಾ ಭೇಟಿಯಾಗಲಿಲ್ಲ ಎಂದರು.