ಜನತಾ ಕರ್ಫ್ಯೂ, ದೀಪ ಬೆಳಗಿಸುವಿಕೆ, ಜಾಗಟೆ ಬಾರಿಸಿದ್ದಕ್ಕೆ ಶಾಸಕ ಮಹೇಶ್ ನೀಡಿದ ವಿವರಣೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ದೂರದೃಷ್ಟಿಯನ್ನು ಇಟ್ಟುಕೊಂಡು ಜನರನ್ನು ಸಜ್ಜುಗೊಳಿಸಲು, ಒಗ್ಗೂಡಿಸಲು ಜನತಾ ಕರ್ಫ್ಯೂ ಮಾಡಲು ಮತ್ತು ದೀಪ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು. ಅದು ಮೂಢನಂಬಿಕೆಯಲ್ಲ, ನಿರ್ವಹಣಾ ಕೌಶಲ ಅದು…

ಹೀಗೆಂದವರು ಶಾಸಕ ಮಹೇಶ್.

ವಿಧಾನಸಭೆಯಲ್ಲಿ ರಾಜ್ಯಪಾಲದ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯ ವೇಳೆ, ವಿಪಕ್ಷ ಶಾಸಕ ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ಅವರು ಪ್ರತಿಕ್ರಿಯಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ, ಕೊರೋನಾ ಬಂದಾಗ ವೈಜ್ಞಾನಿಕವಾಗಿ ಮಾತನಾಡುವ ಬದಲು ಪ್ರಧಾನಿಯವರೇ ದೀಪ ಹಚ್ಚಿ, ಜಾಗಟೆ ಬಡಿಯಿರಿ ಎಂದು ಕರೆ ನೀಡುತ್ತಾರೆ. ದೊಡ್ಡ ದೊಡ್ಡ ನಾಯಕರಿಂದ ಸ್ಪಷ್ಟವಾದ ಸಂದೇಶ ಜನರಿಗೆ ಹೋಗಿಲ್ಲ ಎಂದು ಶಾಸಕ ರಾಜೀವ್ ಆರೋಪಿಸಿದ್ದಾರೆ. ವ್ಯಾಕ್ಸಿನ್ ಯಾರೇ ಮಾಡಲಿ, ಸಾರ್ವಜನಿಕರ ಕ್ಷೇಮ ಪಾಲನೆಗಾಗಿ ಅದು ಅವರ ಕರ್ತವ್ಯ. ಆದರೆ ವೈಜ್ಞಾನಿಕ ಮನೋಭಾವನೆಯನ್ನು ಕೊಂದು, ದೀಪ ಹಚ್ಚಿ ಜಾಗಟೆ ಬಾರಿಸಿ ಎಂದರೆ? ಎಂದು ಪ್ರಶ್ನಿಸಿದರು.

ಈ ವೇಳೆ ಶಾಸಕ ಮಹೇಶ್ ಮಾತನಾಡಿ, ಕೋವಿಡ್ -19 ಮೊದಲ ಅಲೆ ಬಂದಾಗ ಹೆಲ್ತ್ ಎಮರ್ಜೆನ್ಸಿ ಆಗುತ್ತೆ ಅಂತ ದೂರದೃಷ್ಟಿಯಿಟ್ಟುಕೊಂಡು ಜನರನ್ನು ಸಜ್ಜುಗೊಳಿಸಲು ಪ್ರಧಾನಿ ನರೇಂದ್ರ ಜನತಾ ಕರ್ಫ್ಯೂ ಮಾಡಿದ್ರು. ನಂತರ ದೀಪ ಹಚ್ಚಿದ್ದು ಮೂಢನಂಬಿಕೆಗೆ ಅಲ್ಲ. ಅದು ಯೂನಿಫಾರ್ಮಿಟಿ ತರಲು ಆ ರೀತಿಯ ಮಾಡಿತ್ತು. ಕಾರ್ಯತಂತ್ರದ ಭಾಗವಾಗಿದೆ ಅದು. ಜಾಗಟೆ ಬಾರಿಸಿದ್ರೆ ಕೊರೋನಾ ಓಡಿ ಹೋಗ್ತದಾ ಅಂತ ದೊಡ್ಡ ನಾಯಕರು ಕೇಳಿದರು. ಇಷ್ಟು ಪ್ರಧಾನ ಮಂತ್ರಿಗಳಿಗೂ ಗೊತ್ತಿಲ್ವ? ಇದು ಕಾರ್ಯತಂತ್ರದ ಒಂದು ಭಾಗ, ಇಡೀ ಭಾರತೀಯರನ್ನು ಎಚ್ಚರಗೊಳಿಸಿ, ಎಮರ್ಜೆನ್ಸಿಗೆ ಸಜ್ಜಾಗಿ ಎನ್ನುವ ಕೆಲಸವನ್ನು ಪ್ರಧಾನಿಯವರು ಮಾಡಿದ್ದಾರೆ. ಇದಕ್ಕೆ ನಾನು ವೈಯಕ್ತಿಕವಾಗಿ ಅಭಿನಂದನಿಸುತ್ತೇನೆ. ಇಂಥ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತಪ್ಪಾಗಿದ್ದರೆ ಕಮೆಂಟ್ ಮಾಡಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!