ಏನಿದು ಉದ್ಯೋಗ ಜಗತ್ತಿನ ‘ಬೆಳದಿಂಗಳು ನೀತಿ’? ಡಬಲ್ ಉದ್ಯೋಗದ ಯುಗದ ಸೂಚನೆಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನಾದ್ಯಂತ ಉದ್ಯೋಗದಾತರು ತಮ್ಮಲ್ಲಿ ಕೆಲಸಮಾಡುವ ಉದ್ಯೋಗಿಗಳ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಅಥವಾ ಅವರು ತಮ್ಮ ಉದ್ಯೋಗದಿಂದ ಬೇಸರಗೊಳ್ಳದಂತೆ, ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಮಾಡಲು ಬೇರೆ ಬೇರೆ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಂತಹುದೇ ಒಂದು ಪ್ರಯತ್ನವೇ ಈ ʼಬೆಳದಿಂಗಳ ನೀತಿʼ

ಇತ್ತೀಚೆಗೆ ಪ್ರಸಿದ್ಧ ಫುಡ್‌ ಡೆಲಿವರಿ ಕಂಪನಿಯಾದ ಸ್ವಿಗ್ಗೀ ತನ್ನ ಕಂಪನಿಯ ಉದ್ಯೋಗಿಗಳಿಗೆ ಹೊಸ ಉದ್ಯೋಗ ನೀತಿಯೊಂದನ್ನು ಪರಿಚಯಿಸಿದೆ. ʼಬೆಳದಿಂಗಳ ನೀತಿʼ ಎಂದು ಕರೆಸಿಕೊಳ್ಳುವ ಇದರ ಅಡಿಯಲ್ಲಿ ನೀವು ಸ್ವಿಗ್ಗೀಯಲ್ಲಿ ಉದ್ಯೋಗ ಮಾಡುವುದರ ಜೊತೆಗೆ ಇನ್ನೊಂದು ಉದ್ಯೋಗವನ್ನು ಮಾಡಬಹುದಾಗಿದೆ. ಇದು ಒಬ್ಬ ಉದ್ಯೋಗಿಯು ಎರಡೆರಡು ಉದ್ಯೋಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ. ಕಂಪನಿಯ ಕೆಲಸದ ಜೊತೆ ತಮ್ಮಿಷ್ಟದ ಕೆಲಸ ಮಾಡಲು ಇದು ಅನುವು ಮಾಡಿಕೊಡುತ್ತದೆ.

ಏನಿದು ಬೆಳದಿಂಗಳು ನೀತಿ ?
ಈ ನೀತಿಯು ಉದ್ಯೋಗಿಗಳಿಗೆ ತಮ್ಮ ಕೈಲ್ಲಿರುವ ಒಂದು ಉದ್ಯೋಗವನ್ನು ಬಿಟ್ಟು ಕಛೇರಿ ಸಮಯದ ನಂತರ ಅಥವಾ ವಾರಾಂತ್ಯದ ಸಂದರ್ಭದಲ್ಲಿ ಇನ್ನೊಂದು ಉದ್ಯೋಗವನ್ನು ಮಾಡಲು ಅನುಮತಿಸುತ್ತದೆ. ತಮ್ಮ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಕಛೇರಿಯ ಕೆಲಸಕ್ಕೆ ಮತ್ತು ಸಮಯಕ್ಕೆ ಯಾವುದೇ ಅನಾನುಕೂಲವಾಗದಂತೆ ಇನ್ನೊಂದು ಉದ್ಯೋಗವನ್ನು ಮಾಡಲು ಈ ನೀತಿಯು ಅನುವು ಮಾಡಿಕೊಡುತ್ತದೆ. ಆದರೆ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಉದ್ಯೋಗದಾತರಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಕೊವಿಡ್‌ ಸಾಂಕ್ರಾಮಿಕದ ನಂತರ ಎಲ್ಲಿ ಕೆಲಸ ಮಾಡಬೇಕು? ಹೇಗೆ ಕೆಲಸ ಮಾಡಬೇಕು ಎಂದು ಗೊಂದಲ್ಲಿದ್ದ ಹಲವಾರು ಉದ್ಯೋಗಿಗಳಿಗೆ ಇದು ಹೊಸ ಅವಕಾಶವೊಂದನ್ನು ತೆರೆದಿಡುತ್ತದೆ. ಅಲ್ಲದೇ ಕೆಲವರಿಗೆ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಅಥವಾ ಸೇವೆ ಮಾಡಬೇಕೆಂಬ ತುಡಿತವಿರುತ್ತದೆ. ಅಂಥವರಿಗೂ ಇದು ಬೇರೆ ಬೇರೆ ಸಂಸ್ಥೆಗಳಲ್ಲಿ, ಎನ್‌ಜಿಒ ಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!