ಪ್ರತಿಯೊಂದಕ್ಕೂ ಅದರದ್ದೇ ಆದ ಅರ್ಥ ಇದೆ, ಪ್ರಾಣಿಗಳು ಮನೆಯೊಳಗೆ ಬರೋದು, ಮನೆಯಲ್ಲೇ ಇರೋದು ಎಲ್ಲದಕ್ಕೂ ಮೀನಿಂಗ್ ಇದೆ, ಯಾವ ಅರ್ಥ ನೋಡೋಣ ಬನ್ನಿ..
ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಜೇಡರ ಬಲೆ ಕಟ್ಟಿದರೆ ಕೆಟ್ಟ ಶಕುನ ಎಂದರ್ಥ.
ಮನೆಯಲ್ಲಿ ಆಮೆ ಅಥವಾ ಮೀನು ಸಾಕುವುದು ಒಳ್ಳೆಯದು. ಇದರಿಂದ ದೇವರು ಸದಾ ನೆಲೆಸಿರುತ್ತದೆ ಎನ್ನಲಾಗುತ್ತದೆ.
ಒಂದೆರಡು ಜೇನು ಬಂದರೆ ಪರವಾಗಿಲ್ಲ. ಆದರೆ ಮನೆಯೊಳಗೆ ಜೇನು ಕಟ್ಟಬಾರದು, ಇದು ಸಾವಿನ ಮುನ್ಸೂಚನೆ.
ಗಿಳಿ ಅಥವಾ ಪಾರಿವಾಳ ಮನೆಯೊಳಗೆ ಬಂದರೆ ಒಳ್ಳೆಯದು. ಆದರೆ ಸಾಕಬಾರದು. ಕಾಗೆ ಹಾಗೂ ಗೂಬೆ ಮನೆಯೊಳಗೆ ಬಂದರೆ ಶನಿಪ್ರಭಾವ ಹೆಚ್ಚುತ್ತದೆ.
ಇರುವೆಗಳು ಮನೆಯೊಳಗೆ ಇದ್ದೇ ಇರುತ್ತವೆ. ಕಪ್ಪು ಇರುವೆ ಕಾಣಿಸಿದರೆ ಅದು ಲಕ್ಷ್ಮಿಯ ಸಂಕೇತ.
ಹಾವುಗಳು ಮನೆಯೊಳಗೆ ಬರುವುದು ಕೆಟ್ಟ ಸುದ್ದಿಯನ್ನು ಕೇಳುವಂತೆ ಮಾಡುತ್ತದೆ. ಎರಡು ತಲೆ ಹಾವು ಮನೆಯೊಳಗೆ ಬಂದರೆ ಶುಭ.