ವಿದೇಶದ ಕಮ್ಯುನಿಸಂನನ್ನು ಅಪ್ಪಿಕೊಳ್ಳುವವರು ನಮ್ಮದೇ ನೆಲದ ಆರೆಸ್ಸೆಸ್‌ ಸಿದ್ಧಾಂತ ಒಪ್ಪಿಕೊಳ್ಳುವುದರಲ್ಲೇನು ತಪ್ಪು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಖಾನ್‌ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಅವರನ್ನು ಸೆಪ್ಟೆಂಬರ್ 17 ರಂದು ಕಾರ್ಯಕರ್ತನೊಬ್ಬನ ಮನೆಯಲ್ಲಿ ಭೇಟಿಯಾಗಿದ್ದು, ಇದೀಗ ಈ ಭೇಟಿ ರಾಜಕೀಯ ತಿರುವು ಪಡೆದುಕೊಂಡಿದೆ.

ಸೋಮವಾರ ನಡೆದ ರಾಜ್ಯಪಾಲ ಸುದ್ದಿಗೋಷ್ಠಿಯಲ್ಲಿ ಕೇರಳ ಸರ್ಕಾರ ತಮ್ಮ ಮೇಲೆ ಒತ್ತಡಹೇರುತ್ತಿರುವ ರೀತಿಯನ್ನು ಎಳೆಎಳೆಯಾಗಿ ವಿವರಿಸಿದ ಅವರಿಗೆ ಆರೆಸ್ಸೆಸ್‌ ಮುಖ್ಯಸ್ಥರನ್ನು ಭೇಟಿಯಾದ ಪ್ರಶ್ನೆಗಳೂ ಎದುರಾದವು. ಈ ವೇಳೆ ಸ್ಪಷ್ಟವಾಗಿ ಉತ್ತರ ನೀಡಿದ ಅರಿಫ್‌ ಮೊಹಮದ್‌ ಖಾನ್‌, ನಮ್ಮ ದೇಶಕ್ಕೆ ಸಂಬಂಧಪಡದ ಎಲ್ಲಿಯೂ ಹುಟ್ಟಿದ ಕಮ್ಯುನಿಸಂನಲ್ಲಿ ನಿಮ್ಮದೆಂದು ಅಪ್ಪಿಕೊಂಡು ಆಚರಣೆ ಮಾಡುತ್ತಿರುವಾಗ ನಮ್ಮದೇ ನೆಲದ ಆರೆಸ್ಸೆಸ್‌ ಸಿದ್ಧಾಂತವನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ಆ ಸಿದ್ಧಾಂತ ಯಾಕೆ ಬೇಡ ಎಂದು ಪ್ರಶ್ನೆ ಮಾಡಿದ್ದಾರೆ.

ಆರೆಸ್ಸೆಸ್‌ ಎಂದಿಗೂ ಯಾವುದೇ ಸರ್ಕಾರದ ಭಾಗವಾಗಿರಲಿಲ್ಲ. ಆಯಾ ರಾಜ್ಯಗಳಲ್ಲಿ ಆಗುವ ರಾಜಕೀಯ ಕೊಲೆಗಳು ಹಾಗೂ ಅದರ ನಂತರದ ಎಲ್ಲಾ ಸನ್ನಿವೇಶಗಳ ಜವಾಬ್ದಾರಿ ಸ್ಥಳೀಯಯ ಸರ್ಕಾರಗಳದ್ದಾಗಿರುತ್ತದೆ ಎಂದು ಹೇಳಿದರು.

ಆರೆಸ್ಸೆಸ್‌ನ ಅತ್ಯಂತ ದೊಡ್ಡ ವಾರ್ಷಿಕ ಕಾರ್ಯಕ್ರಮವಾದ ಒಟಿಸಿ ಕ್ಯಾಂಪ್‌ (ಆಫೀಸರ್ಸ್‌ ಟ್ರೇನಿಂಗ್ ಕ್ಯಾಂಪ್‌) ಅಂತಿಮ ದಿನದ ಕಾರ್ಯಕ್ರಮಕ್ಕೆ ಅಂದಾಜು 6 ಬಾರಿ ಭೇಟಿ ನೀಡಿದ್ದೇನೆ. ಆರೆಸ್ಸೆಸ್‌ಗೆ ಸಂಬಂಧವೇ ಇಲ್ಲದ, ಸಮಾಜದ ಪ್ರಮುಖರನ್ನು ಕೊನೆಯ ದಿನದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಇದು ಅವರ ಸಂಪ್ರದಾಯ. ನಾನು ಆರೆಸ್ಸೆಸ್‌ನ ಜೊತೆಗಿನ ಈ ಸಂಬಂಧವನ್ನು ಇಷ್ಟಪಟ್ಟಿದ್ದೇನೆ. ಅದರಲ್ಲಿ ನೀವು ಅಚ್ಚರಿ ಪಡುವುದು ಏನಿದೆ ಎಂದು ಹೇಳಿದ್ದಾರೆ .

ಆರೆಸ್ಸೆಸ್‌ ಏನಾದರೂ ನಿಷೇಧಿತ ಸಂಘಟನೆಯೇ, ಹಾಗೇನಾದರೂ ಆಗಿದ್ದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರೂ 1963 ಗಣರಾಜ್ಯೋತ್ಸವ ಪರೇಡ್‌ಗೆ ಆರೆಸ್ಸೆಸ್‌ ಅನ್ನು ಏಕೆ ಆಹ್ವಾನಿಸುತ್ತಿದ್ದರು ಎಂದು ಕೇಳಿದರು. 1962ರ ಇಂಡೋ-ಚೀನಾ ಯುದ್ಧದ ವೇಳೆ ಆರೆಸ್ಸೆಸ್‌ನ ಕೆಲಸದಿಂದಾಗಿ ಪ್ರಭಾವಿತರಾಗಿದ್ದರಿಂದ 1963ರ ಗಣರಾಜ್ಯೋತ್ಸವ ಪರೇಡ್‌ಗೆ ಆರೆಸ್ಸೆಸ್‌ಗೆ ಆಹ್ವಾನ ನೀಡಿದ್ದರು. 3 ಸಾವಿರ ಸದಸ್ಯ ಆರೆಸ್ಸೆಸ್‌ ಈ ಪರೇಡ್‌ನಲ್ಲಿ ಭಾಗವಹಿಸಿತ್ತು.

1986ರ ಶಹ ಬಾನೋ ಕೇಸ್‌ನಿಂದಲೂ ಆರೆಸ್ಸೆಸ್‌ ನನಗೆ ಬೆಂಬಲ ನೀಡಿದೆ. ಆರೆಸ್ಸೆಸ್‌ ಮಾತ್ರವಲ್ಲದೆ ಸಿಪಿಎಂನ ಹಿರಿಯ ನಾಯಕ ನಂಬೂದರಿಪಾದ್‌ ಕೂಡ ನನಗೆ ಬೆಂಬಲ ನೀಡಿದ್ದರು. ಆದರೆ, 1991ರವರೆಗೂ ನನ್ನ ಜೊತೆ ಇದ್ದ ಎಡಪಕ್ಷ ಆಮೇಲೆ ಬೆಂಬಲ ವಾಪಾಸ್‌ ತೆಗೆದುಕೊಂಡಿತು. ಆ ಬಳಿಕ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಅದರ ಸದಸ್ಯರಿಗೆ ಹತ್ತಿರವಾದರು ಎಂದು ಹೇಳಿದರು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಒತ್ತಡದ ಕಾರಣದಿಂದಾಗಿಯೇ ರಾಜೀವ್‌ ಗಾಂಧಿ ಶಹ ಬಾನೋ ತೀರ್ಪನ್ನು ಬದಾಯಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ರಾಜ್ಯಪಾಲರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!