ಯಾರ ಜೀವನದಲ್ಲಿ ಯಾವಾಗ ಎಂತಹ ಬಿರುಗಾಳಿ ಬೀಸುತ್ತದೆ ಎಂದು ಹೇಳುವುದು ಅಸಾಧ್ಯ. ಮುಂಬರುವ ದಿನಗಳಲ್ಲಿ ಭೂಕಂಪ, ಪ್ರಳಯ, ಬರಗಾಲ, ಇನ್ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಬಹುದು. ಅಥವಾ ಊಟ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು ತುಂಬಾ ದುಬಾರಿಯಾಗಬಹುದು. ಇದಕ್ಕಾಗಿ ಸದಾ ತಯಾರಾಗಿರುವುದು ಉತ್ತಮವಾಗಿದೆ. ತುಂಬಾ ಸಮಯ ಇಟ್ಟರೂ ಹಾಳಾಗೋದಿಲ್ಲ ಎನ್ನುವ ಪದಾರ್ಥಗಳು ಯಾವುದು? ಯಾವ ಪದಾರ್ಥ ಎಷ್ಟು ವರ್ಷ ಚೆನ್ನಾಗಿ ಇರುತ್ತದೆ? ಇಲ್ಲಿದೆ ಮಾಹಿತಿ..
ಅಕ್ಕಿ ಎರಡರಿಂದ ಮೂರು ವರ್ಷ

ಬೇಳೆ ಕಾಳುಗಳು ಎರಡರಿಂದ ಮೂರು ವರ್ಷ
ಪಾಸ್ತಾ ಎರಡು ವರ್ಷ
ಓಟ್ಸ್ ಎರಡು ವರ್ಷ
ಯಾವುದೇ ಹಿಟ್ಟುಗಳು ಒಂದು ವರ್ಷ
ಚಿಕನ್, ಮಟನ್, ಫಿಶ್ ಫ್ರೀಝರ್‌ನಲ್ಲಿಟ್ಟರೆ ಒಂದು ವರ್ಷ

ಪೀನಟ್ ಬಟರ್ ಎರಡ ವರ್ಷ
ಜೇನುತುಪ್ಪ ಲೆಕ್ಕವೇ ಇಲ್ಲ
ಉಪ್ಪು ಲೆಕ್ಕವೇ ಇಲ್ಲ
ಸಕ್ಕರೆ ಲೆಕ್ಕವೇ ಇಲ್ಲ
ಹಾಲಿನ ಪುಡಿ ಎರಡು ವರ್ಷ
ಈ ಪದಾರ್ಥಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಯಾವುದೇ ಕೆಟ್ಟ ಪರಿಸ್ಥಿತಿ ಬಾರದೇ ಇದ್ದರೂ ನಿಧಾನವಾಗಿ ಇವುಗಳನ್ನು ಖಾಲಿ ಮಾಡಬಹುದು. ಓಟ್ಸ್ ಇದ್ದರೆ ತಿಂಡಿ ಆಗಿಬಿಡುತ್ತದೆ. ಅನ್ನ ಹಾಗೂ ಬೇಳೆ ಇದ್ದಲ್ಲಿ ಅಡುಗೆ ಆಗಿಬಿಡುತ್ತದೆ. ಮುಂದೆ ಬರುವ ಎಂಥದ್ದೇ ಸಂದರ್ಭಗಳಿಗಾಗಿ ಈಗಲೇ ತಯಾರಾಗಿರಿ.


