ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ್ಯಾಪ್ ಆಗಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹನಿ ಟ್ರ‍್ಯಾಪ್ ಮಾಡುವುದು ಅಲ್ಲ. ಹನಿಟ್ರ‍್ಯಾಪ್ ಆಗುವುದು. ಮಾಡಿದ್ದುಣ್ಣೋ ಮಹರಾಯ. ಹಾಗೇನಾದರೂ ಆಗಿದ್ದರೆ ದೂರು ನೀಡಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ ಕಾವೇರಿ ಆರತಿ ಹಿನ್ನೆಲೆಯಲ್ಲಿ ಕಾವೇರಿಗೆ ಪೂಜೆ ಸಲ್ಲಿಸಲು ಭಾಗಮಂಡಲಕ್ಕೆ ಹೆಲಿಕಾಪ್ಟರ್‌ನಲ್ಲಿ ಡಿಕೆಶಿ ಬಂದಿದ್ದಾರೆ. ಕಾವೇರಿ ತೀರ್ಥವನ್ನು ನೇರವಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಸ್ಯಾಂಕಿ ಕೆರೆಯ ಪೂಜೆಯಲ್ಲಿ ಇಂದು ಸಂಜೆ ಡಿಕೆಶಿ ಭಾಗಿಯಾಗಲಿದ್ದಾರೆ.