ಭಾರತಕ್ಕೆ ಈ ಬಾರಿ ಅಕ್ಕಿ ಇಳುವರಿ ಕುಸಿತದ ಆತಂಕ- ಬಿಕ್ಕಟ್ಟು ಉಂಟಾಗದಿರಲು ಕೈಗೊಳ್ಳುತ್ತಿರುವ ಕ್ರಮವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದಲ್ಲಿ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ ಮಾನ್ಸೂನ್‌ ಮಳೆ ಬಂದಿರುವ ಕಾರಣ ಈ ಬಾರಿ ದೇಶದ ಅಕ್ಕಿ ಉತ್ಪಾದನೆಯಲ್ಲಿ ಕುಸಿತ ಉಂಟಾಗಬಹುದು ಎನ್ನಲಾಗಿದೆ. ಈ ಕುರಿತು ಭಾರತದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ವಿವರಣೆ ನೀಡಿದ್ದು ದೇಶದಲ್ಲಿ ಅಕ್ಕಿ ಉತ್ಪಾದನೆ ಕುಸಿಯುತ್ತಿರುವುದನ್ನು ಅವರು ದೃಢಪಡಿಸಿದ್ದಾರೆ. ಬರಗಾಲದ ಕಾರಣದಿಂದ 2022-2023 ಬೆಳೆ ವರ್ಷದಲ್ಲಿ ಅಕ್ಕಿ ಉತ್ಪಾದನೆಯು 7-8 ಮಿಲಿಯನ್ ಟನ್‌ಗಳಷ್ಟು ಕುಸಿಯಬಹುದು ಅಥವಾ ಕೆಟ್ಟ ಸನ್ನಿವೇಶದಲ್ಲಿ 12 ಮಿಲಿಯನ್ ಟನ್‌ಗಳಷ್ಟು ಕುಸಿಯಬಹುದು ಎಂದು ಅವರು ಹೇಳಿದ್ದಾರೆ.

ಪ್ರಮುಖ ನಾಲ್ಕು ರಾಜ್ಯಗಳು ಬರ ಪೀಡಿತವಾಗಿದೆ. ಇದರಿಂದ 7-8 ಮಿಲಿಯನ್‌ ಟನ್‌ ಗಳಷ್ಟು ಉತ್ಪಾದನೆ ಕಡಿಮೆಯಾಗಿದೆ. ಮಳೆಯಿಂದ ನಾಟಿಗೆ ತೊಂದರೆಯಾದ ಪರಿಣಾಮ ಒಟ್ಟು ಭತ್ತದ ಬಿತ್ತನೆ ಪ್ರದೇಶಗಳಲ್ಲಿ ಈ ವರ್ಷ 38.06 ಲಕ್ಷ ಹೆಕ್ಟೇರ್‌ಗಳಷ್ಟು ಪ್ರದೇಶ ಕಡಿಮೆಯಾಗಿದೆ. ಇದರಿಂದಾಗಿ ಸುಮಾರು 10 ಅಥವಾ 12 ಮಿಲಿಯನ್‌ ಟನ್‌ ಗಳಷ್ಟು ಉತ್ಪಾದನೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಆಹಾರ ಬಿಕ್ಕಟ್ಟು ಉಂಟಾಗದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರವು ವಿವಿಧ ದರ್ಜೆಯ ಅಕ್ಕಿಯ ರಫ್ತುಗಳ ಮೇಲೆ 20% ಸುಂಕವನ್ನು ವಿಧಿಸಿದೆ ಮತ್ತು ತಕ್ಷಣವೇ ಜಾರಿಗೆ ಬರುವಂತೆ ಒಡೆದ ಅಕ್ಕಿ ಸಾಗಣೆಯನ್ನು ನಿಷೇಧಿಸಿದೆ. ಇದು ಸ್ಥಲೀಯ ಬೆಲೆಗಳನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಲಿದೆ.

ಕೆಲ ವರದಿಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ ಅಕ್ಕಿ ಸಾಗಣೆಗಳು ಗಣನೀಯವಾಗಿ ಹೆಚ್ಚಾಗಿವೆ. ಮುರಿದ ಅಕ್ಕಿಯ ಬೆಲೆಗಳು 2022 ರಲ್ಲಿ ಇಲ್ಲಿಯವರೆಗೆ 38% ರಷ್ಟು ಏರಿಕೆಯಾಗಿದೆ, ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ರಫ್ತು 2.13 ಮಿಲಿಯನ್ ಟನ್‌ಗಳಿಗೆ ಏರಿದೆ ಇದು ಕಳೆದ ವರ್ಷ ಇದೇ ಸಂದರ್ಭದಲ್ಲಿ 1.58 ಮಿಲಿಯನ್ ಟನ್‌ಗಳಷ್ಟಿತ್ತು. ಈ ಹಿನ್ನಲೆಯಲ್ಲಿ ಭಾರತವು ಅಕ್ಕಿ ರಫ್ತುಗಳನ್ನು ನಿರ್ಬಂಧಿಸಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!