ಸಾಮಾನ್ಯವಾಗಿ ರಸ್ತೆಯಲ್ಲಿ ಸಿಗುವ ಮಂಗಳಮುಖಿಯರಿಗೆ ಹಣ ನೀಡಿದಾಗ ತಮ್ಮ ಬಳಿ ಇರುವ ನಾಣ್ಯವನ್ನು ಅವರು ನಿಮಗೆ ನೀಡುತ್ತಾರೆ. ತಮ್ಮ ಕೈಬಳೆಗೆ ತಾಕಿಸಿ ನಾಣ್ಯವನ್ನು ಕೊಡುತ್ತಾರೆ. ಆ ನಾಣ್ಯವನ್ನು ಖರ್ಚು ಮಾಡಬೇಕಾ? ಅಥವಾ ಹಾಗೆ ಇಟ್ಟುಕೊಳ್ಳಬೇಕಾ? ಇಲ್ಲಿದೆ ಮಾಹಿತಿ..
ಮಂಗಳಮುಖಿಯರು ನೀಡಿದ ಹಣವನ್ನು ಖರ್ಚು ಮಾಡಬಾರದು. ಪಾಕೆಟ್‌ನಲ್ಲಿಯೇ ಇರಿಸಿಕೊಳ್ಳಬೇಕು. ನಾಣ್ಯಗಳನ್ನು ಮನೆಯಲ್ಲಿ ಪ್ರತ್ಯೇಕವಾಗಿ ಒಂದೆಡೆ ಸಂಗ್ರಹಿಸುತ್ತಾ ಹೋಗಬೇಕು. ಹೀಗೆ ಮಾಡೋದರಿಂದ ಆರ್ಥಿಕವಾಗಿ ಸಬಲರಾಗುತ್ತೀರಿ ಎಂಬ ನಂಬಿಕೆ ಇದೆ.
ನಾಣ್ಯವನ್ನು ಬಾಯಲ್ಲಿ ಕಚ್ಚಿ ಕೊಡೋದರಿಂದ ಲಕ್ಷ್ಮೀ ದೇವಿ ಕಾಲು ಮುರಿದುಕೊಂಡು ನಿಮ್ಮ ಬಳಿಯಲ್ಲಿಯೇ ಇರಲಿ ಎಂದು ಮಂಗಳಮುಖಿಯರು ನಿಸ್ವಾರ್ಥದಿಂದ ಹಾರೈಸುತ್ತಾರೆ. ಲಕ್ಷ್ಮೀದೇವಿಗೆ ನೋವಾದ್ರೂ ಪರವಾಗಿಲ್ಲ, ತನ್ನ ಮಕ್ಕಳ ಮನೆಯಲ್ಲಿಯೇ ಇರಲಿ ಎಂಬ ಉದ್ದೇಶದಿಂದ ಹಣವನ್ನು ಶಕ್ತಿ ತುಂಬಿದ ಕೈ ಮತ್ತು ಬಳೆಗೆ ತಾಗಿಸಿ, ಬಾಯಲ್ಲಿ ಕಚ್ಚಿ ನೀಡುತ್ತಾರೆ. ಈ ಹಣ ನೀಡುವಾಗ ಮಂಗಳಮುಖಿಯರಲ್ಲಿ ತಾಯಿ ಪ್ರೀತಿ ಇರುತ್ತದೆ.