ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತಿರುವಲ್ಲೂರಿನಲ್ಲಿ ಉಂಟಾದ ರೈಲು ಅಪಘಾತಕ್ಕೆ ಸಿಗ್ನಲ್ ರೂಟ್ನಲ್ಲಿ ಮಿಸ್ ಮ್ಯಾಚ್ ಆದ ಕಾರಣ ಎಂದು ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಆರ್.ಎನ್ ಸಿಂಗ್ ಹೇಳಿದ್ದಾರೆ.
ಮೈಸೂರು ಧರ್ಭಂಗಾ ಭಾಗಮತಿ ಎಕ್ಸ್ಪ್ರೆಸ್ ಮೇನ್ಲೈನ್ನಲ್ಲಿಯೇ ಬದಲಾವಣೆಗೆಗೊಂಡಿದೆ. ಏನಾಯ್ತು ಅನ್ನೋದು ಇನ್ನೂ ಸ್ಪಷ್ಟವಿಲ್ಲ. ಈ ಕಾರಣದಿಂದಲೇ ದುರಂತ ನಡೆದಿದೆ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಆದ್ರೆ ಪ್ಯಾಸೆಂಜರ್ ಎಕ್ಸ್ಪ್ರೆಸ್ ಅಜಾಗರೂಕತೆಯಿಂದ ಬೇರೆ ಟ್ರ್ಯಾಕ್ ಮೇಲೆ ಹೋದ ಕಾರಣ ಆ ಟ್ರ್ಯಾಕ್ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಈ ಒಂದು ಅಪಘಾತ ಸಂಭವಿಸಿದೆ ಎಂದು ಸಿಂಗ್ ಹೇಳಿದ್ದಾರೆ.
ಇದಕ್ಕೆ ಅಸಲಿ ಕಾರಣವೇನು ಎಂಬುದನ್ನು ಇನ್ನಷ್ಟೇ ತಿಳಿದು ಬರಬೇಕಿದೆ. ಅದನ್ನೇ ಈಗಲೇ ಹೇಳುವುದು ಸಾಧ್ಯವಿಲ್ಲ.ಸಿಗ್ನಲ್ನ್ನು ಮೇನ್ಲೈನ್ಗೆ ಅಂತಲೇ ನೀಡಲಾಗಿತ್ತು. ಆದ್ರೆ ಪ್ಯಾಸೆಂಜರ್ ಟ್ರೇನ್ ಕ್ಲೋಸ್ ಆದ ಟ್ರ್ಯಾಕ್ನಲ್ಲಿ ಚಲಿಸಿದ ಕಾರಣ ಈ ಭೀಕರ ಅಪಘಾತ ಸಂಭವಿಸಿದೆ. ಮೈಸೂರು-ಧರ್ಭಂಗಾ ಭಾಗಮತಿ ಎಕ್ಸ್ಪ್ರೆಸ್ ಆಂಧ್ರಪ್ರದೇಶದ ಗುಡೂರ್ಗೆ ಹೊರಟಿತ್ತು. ಈ ವೇಳೆ ತಿರುವಲ್ಲೂರು ಕವರೈಪೆಟ್ಟಾಯಿ ಸ್ಟೇಷನ್ನಲ್ಲಿ ನಿಲ್ಲಬೇಕಿತ್ತು. ಅದೇ ಲೈನ್ನಿಂದಲೇ ಗೂಡ್ಸ್ ರೈಲು ಕೂಡ ಗುಡೂರ್ಗೆ ಹೊರಟಿತ್ತು, ಈ ವೇಳೆ ಹಿಂದಿನಿಂದ ಬಂದ ಗುದ್ದಿದೆ ಪ್ಯಾಸೆಂಜರ್ ರೈಲು.
1300 ಜನರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಒಟ್ಟು 19 ಜನರು ಗಾಯಗೊಂಡಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ. ಈಗಾಗಲೇ ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಸ್ಗಳ ಮೂಲಕ ಗಾಯಾಳುಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ಚೆನ್ನೈನಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿ ಈ ಒಂದು ದುರಂತ ಸಂಭವಿಸಿದೆ ಎಂದು ಸಿಂಗ್ ಹೇಳಿದ್ದಾರೆ.