ಕಾವೇರಿ ಕಿಚ್ಚು: ಬಂದ್ ವೇಳೆ ಏನಿರುತ್ತೆ? ಏನಿರೋದಿಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಕಾವೇರಿ ಕೂಗು ಜೋರಾಗಿದ್ದು, ಇಂದು ಅಕ್ಷರಶಃ ಕರ್ನಾಟಕ ಸ್ತಬ್ಧವಾಗಿದೆ.

ಕಾವೇರಿ ನೀರಿನ ಒಂದು ಹನಿಯೂ ತಮಿಳುನಾಡಿಗೆ ಹೋಗಬಾರದು ಎಂದು ರೈತರು ಪ್ರತಿಭಟಿಸುತ್ತಿದ್ದಾರೆ. ನಮ್ಮಲ್ಲಿಯಯೇ ಬರಗಾಲ ಎದುರಾಗಿದೆ, ಮಳೆಯಿಲ್ಲದೆ ಜನ ಹೈರಾಣಾಗಿದ್ದಾರೆ ಆದರೆ ಹೀಗೇ ತಮಿಳುನಾಡಿಗೆ ನೀರು ಬಿಡುತ್ತಲೇ ಇದ್ದರೆ ನಮಗೆ ಕುಡಿಯುವುದಕ್ಕೂ ನೀರು ಇಲ್ಲದಂತಾಗುತ್ತದೆ ಎನ್ನುವುದು ರೈತರ ಮಾತಾಗಿದೆ.

ಮೊನ್ನೆಯಷ್ಟೇ ಬೆಂಗಳೂರು ಬಂದ್ ಯಶಸ್ವಿಯಾಗಿದ್ದು, ಇದೀಗ ಸಾವಿರಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಿರುವ ಕರ್ನಾಟಕ ಬಂದ್ ಯಶಸ್ವಿಯಾಗಲಿದ್ಯಾ? ಕಾದುನೋಡಬೇಕಿದೆ!

ಇಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಆಗಲಿದ್ದು, ಯಾವ ಸೇವೆ ಲಭ್ಯವಿದೆ, ಯಾವ ಸೇವೆ ಲಭ್ಯವಿಲ್ಲ? ಇಲ್ಲಿದೆ ಮಾಹಿತಿ..

ಏನಿದೆ?
ಆಸ್ಪತ್ರೆ
ಮೆಡಿಕಲ್ಸ್
ಆಂಬುಲೆನ್ಸ್
ಹಾಲು, ತರಕಾರಿ
ಬ್ಯಾಂಕ್
ಪೆಟ್ರೋಲ್ ಬಂಕ್
ಎಪಿಎಂಸಿ
ಕೆಎಸ್‌ಆರ್‌ಟಿಸಿ
ಬಿಎಂಟಿಸಿ

ಏನಿಲ್ಲ?
ಹೊಟೇಲ್
ಓಲಾ ಊಬರ್
ಆಟೋ ಕ್ಯಾಬ್
ಮಾಲ್
ಗೂಡ್ಸ್ ವಾಹನ
ಥಿಯೇಟರ್
ಲಾರಿ ಸೇವೆ
ಜ್ಯುವೆಲ್ಲರಿ
ಜಿಮ್
ರಸ್ತೆ ಬದಿ ವ್ಯಾಪಾರ
ಬನ್ನೇರುಘಟ್ಟ ಜೈವಿಕ ಉದ್ಯಾನವನ
ಪಡಿತರ ಅಂಗಡಿ
ಮಾರ್ಕೆಟ್
ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಟ ಇಲ್ಲ

ಇನ್ನು ಬೆಂಗಳೂರು, ಕೋಲಾರ, ಚಾಮರಾಜನಗರ, ಮಂಡ್ಯ ಭಾಗಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!