NEWS | ಸುದ್ದಿಗಳೇ ಇಲ್ಲದಿದ್ರೆ ಏನಾಗ್ತಿತ್ತು.. ನ್ಯೂಸ್‌ ನಮಗೆ ಯಾಕೆ ಬೇಕು? ನೋಡಿ..

ನ್ಯೂಸ್‌ ಇಲ್ಲದೇ ಇದ್ದಿದ್ರೆ ಹೇಗಿರ್ತಿತ್ತು? ಹೇಳಿದ್ದನ್ನೇ ಹೇಳ್ತಾರೆ, ಕೇಳಿದ್ದು ಕೇಳಿ ಬೋರಾಯ್ತು ಎಂದು ಹೇಳಿದ್ರೂ ನ್ಯೂಸ್‌ ಚಾನೆಲ್‌ ಬದಲಾಯಿಸ್ತೀರೇ ಹೊರತು ನ್ಯೂಸ್‌ನ್ನೇ ಬದಲಾಯಿಸಿ ಸಿನಿಮಾ ನೋಡೋದಿಲ್ಲ..

ಟಿವಿಯಲ್ಲಿ ಆಂಕರ್ಸ್‌ ಕೂಗೋದು ನೋಡಿ ತಲೆಕೆಟ್ಟೀತು ಎಂದು ಹೇಳೋ ಕೆಲವರು ಬೆಳಗ್ಗೆ ಶಾಂತವಾಗಿ ಕೂತು ನ್ಯೂಸ್‌ಪೇಪರ್‌ ಓದಿ ಮುಗಿಸ್ತಾರೆ. ಇಡೀ ಜಗತ್ತಿನಲ್ಲಿ ಏನೆಲ್ಲಾ ಆಗ್ತಿದೆ? ನಮ್ಮ ಸುತ್ತಮುತ್ತ ಏನು ನಡೀತಿದೆ, ಯಾವ ಸೆಲೆಬ್ರಿಟಿ ಯಾರನ್ನು ಮದುವೆ ಆಗ್ತಿದ್ದಾರೆ? ಚುನಾವಣೆ, ವೋಟಿಂಗ್‌, ಬಜೆಟ್‌ ಎಲ್ಲದರ ಕ್ಷಣ ಕ್ಷಣದ ಮಾಹಿತಿಗೂ ನ್ಯೂಸ್‌ ಬೇಕು..

ಇನ್ಯಾಕೆ ಬೇಕು?
ನಿಮ್ಮ ಪಕ್ಕದ ಮನೆಯವರಿಗೆ ಕೊರೋನಾ ಬಂದಿದ್ರೂ ನಿಮಗೆ ಗೊತ್ತಾಗೋದಿಲ್ಲ, ಆದರೆ ಕೊರೋನಾ ಸೀರಿಯಸ್‌ನೆಸ್‌ ಅರಿವಿಗೆ ಬರುವಂತೆ ಮಾಡಿದ್ದು, ಅದರ ಬಗ್ಗೆ ಮಾಹಿತಿ ಕೊಟ್ಟಿದ್ದು ಮೀಡಿಯಾ.

ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿ, ಸರ್ಕಾರಿ ಕೆಲಸ, ಪೊಲಿಸಿ, ನಿರ್ಧಾರ, ಸರ್ಕಾರದ ಜವಾಬ್ದಾರಿ, ಬೇಜವಾಬ್ದಾರಿ ಎಲ್ಲವನ್ನು ಮುಟ್ಟಿಸೋದು ಸುದ್ದಿ.

ಜನರ ಬಗ್ಗೆ ಅಭಿಪ್ರಾಯ, ಜನರ ಅಭಿಪ್ರಾಯ ಎಲ್ಲವನ್ನೂ ಎಲ್ಲರಿಗೆ ಮುಟ್ಟಿಸೋದು ಮೀಡಿಯಾ

ಬ್ಯುಸ್‌ನೆಸ್‌ ಬಗ್ಗೆ ಬೇಕಾದ ಮಾಹಿತಿ, ಮಾರ್ಕೆಟ್‌ ಟ್ರೆಂಡ್ಸ್‌, ಫೈನಾನ್ಶಿಯಲ್‌ ಡೆವಲಪ್‌ಮೆಂಟ್ಸ್‌, ಹೊಸ ಹೊಸ ಆಪರ್ಚುನಿಟಿ ಬಗ್ಗೆ ತಿಳಿಯುತ್ತದೆ.

ಎಮರ್ಜೆನ್ಸಿ ಸಮಯ, ಜನರಿಗೆ ಹೊರಗೆ ನಡೆಯುವ ಅಪಾಯಗಳ ಬಗ್ಗೆ ಮಾಹಿತಿ, ಭೂಕಂಪ, ಸುನಾಮಿ, ಕೊರೋನಾದಂತ ರೋಗಗಳ ಬಗ್ಗೆ ಮಾಹಿತಿ ಸಿಗುತ್ತದೆ.

ನ್ಯೂಸ್‌ ಎಷ್ಟೊಂದು ಮಂದಿಗೆ ಜ್ಞಾನ ಬಂಡಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು, ಎಲ್ಲ ಆಯಾಮಗಳಲ್ಲಿಯೂ ಸುದ್ದಿಮನೆ ಬೇಕೇಬೇಕು.

ಎಲ್ಲೆಡೆ ಪಾರದರ್ಶಕತೆ ಇರಬೇಕು, ಅದನ್ನು ಮಾಡಲು ಮೀಡಿಯಾವೊಂದೇ ಮಾರ್ಗ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!