ಇಷ್ಟಕ್ಕೂ ಏನಾಗಿದೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಉಗ್ರ ಶಾರಿಕ್‌ಗೆ? ಗಂಭೀರ ಗಾಯಗಳಾಗಿದ್ದು ಎಲ್ಲೆಲ್ಲಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಉಗ್ರ ಮುಹಮ್ಮದ್ ಶಾರಿಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಷ್ಟಕ್ಕೂ ಆತನಿಗೆ ಆಗಿರುವ ಗಾಯಗಳೇನು?
ದೇಹದ ಎಲ್ಲೆಲ್ಲಿಗೆ ಹಾನಿಯಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಪೊಲೀಸ್ ಇಲಾಖೆ ನೀಡಿಲ್ಲವಾದರೂ, ಮೂಲಗಳಪ್ರಕಾರ ಸ್ಫೋಟದ ಸಂದರ್ಭ ಶಾರಿಕ್‌ನ ಶ್ವಾಸಕೋಶಗಳಿಗೆ ಹೊಗೆಯಿಂದಾಗಿ ಹಾನಿ ಉಂಟಾಗಿದೆ. ಇನ್ನು ದೇಹದ ಬಹುಭಾಗಗಳು ಬೆಂಕಿಯ ಆಘಾತಕ್ಕೆ ಸಿಕ್ಕಿವೆ. ಶ್ವಾಸಕೋಶದೊಳಗೆ ಹೊಗೆ ತುಂಬಿದ್ದರಿಂದ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅಲ್ಲದೆ ಸ್ಫೋಟದ ಸಂದರ್ಭ ಆತನ ಕಣ್ಣಿಗೂ ಹಾನಿಯಾಗಿತ್ತು.ಸದ್ಯ ಆತ ಮಾತನಾಡುವ ಸ್ಥಿತಿಗೆ ತಲುಪಿದ್ದರೂ ಸಂಪೂರ್ಣವಾಗಿ ಗುಣಮುಖನಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!