ಎಸ್‌ಬಿಐ ದಿಂದ ವಾಟ್ಸಾಪ್‌ ಬ್ಯಾಂಕಿಂಗ್:‌ ಇನ್ಮುಂದೆ ಮಿನಿ ಸ್ಟೇಟ್‌ಮೆಂಟ್‌ ಮೊಬೈಲ್‌ ನಲ್ಲೇ ಪಡೆಯಿರಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ತನ್ನ ಗ್ರಾಹರಿಗೆ ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಗಳನ್ನು ಪ್ರಾರಂಭಿಸಿದೆ. ಇದರ ಅನುಸಾರ ಮಿನಿ ಸ್ಟೇಟ್‌ಮೆಂಟ್ ಮತ್ತು ಖಾತೆಯ ಬ್ಯಾಲೆನ್ಸ್ ಅನ್ನು ತಕ್ಷಣವೇ ಪರಿಶೀಲಿಸಲು SBI WhatsApp ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಮಿನಿ ಸ್ಟೇಟ್‌ ಮೆಂಟ್‌ ನಲ್ಲಿ ಗ್ರಾಹಕರ ಕೊನೆಯ ಐದು ವಹಿವಾಟುಗಳ ವಿವರಗಳು ಲಭ್ಯವಾಗುತ್ತದೆ.

“ನಿಮ್ಮ ಬ್ಯಾಂಕ್ ಈಗ WhatsApp ನಲ್ಲಿದೆ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಿ ಮತ್ತು ಪ್ರಯಾಣದಲ್ಲಿರುವಾಗ ಮಿನಿ ಸ್ಟೇಟ್‌ಮೆಂಟ್ ಅನ್ನು ವೀಕ್ಷಿಸಿ” ಎಂದು SBI ಆಗಸ್ಟ್ 16 ರಂದು ಟ್ವೀಟ್‌ನಲ್ಲಿ ತಿಳಿಸಿದೆ. ಗ್ರಾಹಕರು +919022690226 ಸಂಖ್ಯೆಗೆ ‘ಹಾಯ್’ ಎಂದು ಸಂದೇಶವನ್ನು ಕಳುಹಿಸಿದಾಗ SBI WhatsApp ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಲಿವೆ.

ಹೇಗೆ ಪಡೆಯೋದು ?

SBI WhatsApp ಬ್ಯಾಂಕಿಂಗ್ ಸೇವೆಗಳನ್ನು ಬಳಸಲು, ನೀವು ಮೊದಲು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು SMS ಮೂಲಕ ನಿಮ್ಮ ಒಪ್ಪಿಗೆಯನ್ನು ನೀಡಬೇಕು.

ನೊಂದಾಯಿಸದ ಗ್ರಾಹರಿಗೆ “ಈ ಸೇವೆಗಳನ್ನು ಬಳಸಲು ನಿಮ್ಮ ಸಮ್ಮತಿಯನ್ನು ನೋಂದಾಯಿಸಲು ಬ್ಯಾಂಕ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 917208933148 ಗೆ ಕೆಳಗಿನ SMS WAREG A/c ಅನ್ನು ಕಳುಹಿಸಿ. ಈ ಸೇವೆಗಳಿಗಾಗಿ ನೀವು ವಿವರವಾದ T&C ಅನ್ನು bank.sbi ನಲ್ಲಿ ವೀಕ್ಷಿಸಬಹುದು” ಎಂದು SBI ಬೋಟ್ ಸಂದೇಶದಲ್ಲಿ ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!