ಗ್ರಾಹಕರಿಗೆ ಹೊಸ ಫೀಚರ್ಸ್ ಪರಿಚಯಿಸಿದ ವ್ಯಾಟ್ಸ್ಆ್ಯಪ್: ಏನು ಅದರ ವಿಶೇಷತೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವ್ಯಾಟ್ಸ್ಆ್ಯಪ್ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದ್ದು,ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ.
ಇದೀಗ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪ್ರಕಾರ ವ್ಯಾಟ್ಸ್ಆ್ಯಪ್ ಗ್ರೂಪ್ ಸದಸ್ಯರ ಮಿತಿಯನ್ನು 512ಕ್ಕೆ ಏರಿಕೆ ಮಾಡಿದೆ. ಸದ್ಯ ವ್ಯಾಟ್ಸ್ಆ್ಯಪ್ ಗ್ರೂಪ ಸದಸ್ಯರ ಮಿತಿ 256 ಮಾತ್ರ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರೂಪ್‌ಗೆ ಸದಸ್ಯರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದೀಗ ಹೊಸ ಫೀಚರ್ಸ್ ಪ್ರಕಾರ 512 ಮಂದಿಯನ್ನು ಗ್ರೂಪ್ ಸದಸ್ಯರಾಗಿ ಸೇರಿಸಿಕೊಳ್ಳಲು ಸಾಧ್ಯವಿದೆ.
ಇನ್ನು ಈ ಹೊಸ ಫೀಚರ್ಸ್ ಸದ್ಯ ವ್ಯಾಟ್ಸ್ಆ್ಯಪ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಫೀಚರ್ಸ್ ಆ್ಯಪ್‌‌ನಲ್ಲಿ ಲಭ್ಯವಾಗಲಿದೆ.
ಇದೇ ತಿಂಗಳಲ್ಲಿ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಲಭ್ಯವಾಗಲಿದ್ದು, ಸದ್ಯ ವ್ಯಾಟ್ಸ್‌ಆ್ಯಪ್ ಬೀಟಾ ಬಳಕೆದಾರರು ಆ್ಯಂಡ್ರಾಯ್ಡ್ ಹಾಗೂ ioS ಬಳಕೆದಾರರು ಹೊಸ ಫೀಚರ್ಸ್ ಬಳಕೆ ಮಾಡಲು ಸಾಧ್ಯವಿದೆ.
ಹಲವು ಬಳಕೆದಾರರು ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಿಸಲು ಕೋರಿದ್ದರು. ಇದೀಗ ಮನವಿಯನ್ನು ಪುರಸ್ಕರಿಸಿರುವ ವ್ಯಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರ ಮಿತಿ ಹೆಚ್ಚಿಸಿದೆ.
ಏಕಕಾಲಕ್ಕೆ 32 ಜನರ ಗ್ರುಪ್‌ ವಾಯ್‌್ಸ ಕಾಲ್‌
ಇದರ ಜೊತೆಗೆ ವಾಟ್ಸಾಪ್‌ನಲ್ಲಿ ಏಕಕಾಲಕ್ಕೆ 32 ಜನರ ಗ್ರುಪ್‌ ವಾಯ್‌್ಸ ಕಾಲ್‌ ಮಾಡುವುದು, 2 ಜಿಬಿ (ಗೀಗಾ ಬೈಟ್‌) ಗಾತ್ರದ ಫೈಲ್‌ಗಳನ್ನು ರವಾನಿಸುವುದು ಸೇರಿದಂತೆ ಹಲವಾರು ಹೊಸ ಫೀಚರ್‌ಗಳನ್ನು ಸೇರಿಸಲಾಗುವುದು ಎಂದು ಕಂಪನಿ ಘೋಷಿಸಿದೆ.
ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರುಪ್‌ ವಾಯ್‌್ಸ ಕಾಲ್‌ ಮಾಡಬಹುದಾಗಿದೆ. ಅಲ್ಲದೇ 1 ಜಿಬಿಕ್ಕಿಂತಲೂ ಕಡಿಮೆ ಗಾತ್ರದ ಫೈಲ್‌ಗಳನ್ನು ಮಾತ್ರ ರವಾನೆ ಮಾಡಬಹುದಾಗಿದೆ.‘ಇದಲ್ಲದೇ ವಾಟ್ಸಾಪ್‌ ಗ್ರುಪ್‌ನ ಎಡ್ಮಿನ್‌, ಯಾವುದೇ ಸಮಯದಲ್ಲೂ ಸಂದೇಶವನ್ನು ಅಳಸಿಹಾಕಬಹುದು. ಅಳಿಸಿ ಹಾಕಿದ ಸಂಭಾಷಣೆಗಳು ಗ್ರುಪ್‌ನಲ್ಲಿರುವ ಸದಸ್ಯರಿಗೆ ಕಾಣಿಸದಂತೆ ಮಾಡುವ ಹೊಸ ಫೀಚರ್‌ ಅನ್ನು ಅಳವಡಿಸಲಾಗುವುದು’ ಕಂಪನಿ ವಕ್ತಾರ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!