ʼದೊಡ್ಡಮರ ಬಿದ್ದಾಗʼ… ರಾಜೀವ್‌ ಹೊಗಳುವ ಭರದಲ್ಲಿ‌ ಕಾಂಗ್ರೆಸ್ ಗೆ ಮುಜುಗರ ತಂದಿತ್ತ ಅಧೀರ್ ಚೌಧರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾಡಿರುವ ಎಡವಟ್ಟು ಟ್ವಿಟ್‌ ಒಂದು ಬಾರೀ ವೈರಲ್‌ ಆಗುತ್ತಿದ್ದು, ಸ್ವಪಕ್ಷ ಕಾಂಗ್ರೆಸ್‌ ಗೆ ತೀವ್ರ ಮುಜುಗರ ಸೃಷ್ಟಿಸಿದೆ.
ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆಯಾಗಿ ಇಂದಿಗೆ( ಶನಿವಾರ) 30 ವರ್ಷ. ಅವರ ಪುಣ್ಯಸ್ಮರಣೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಟ್ವಿಟ್‌ ಮಾಡಿದ್ದ ಅಧೀರ್ ರಂಜನ್ ಚೌಧರಿ, “ಜಬ್ ಭಿ ಕೋಯಿ ಬಡಾ ಪೆಡ್ ಗಿರ್ತಾ ಹೈ, ತೋ ಧರ್ತಿ ಥೋಡಿ ಹಿಲ್ತಿ ಹೈ (ದೊಡ್ಡ ಮರ ಬಿದ್ದಾಗ ಭೂಮಿ ಸಹಜವಾಗಿ ನಡುಗುತ್ತದೆ) ಎಂಬ ಸಾಲುಗಳನ್ನು ಉಲ್ಲೇಖಿಸಿದ್ದರು.
ಆದರೆ ಈ ಟ್ವಿಟ್‌ ಹೊರಬೀಳುತ್ತಲೇ ಕಾಂಗ್ರೆಸ್‌ ನ್ನು ಪೇಚಿಗೆ ಸಿಲುಕಿಸಿದೆ. ರಂಜನ್‌ ಚೌದರಿ ಈ ಸಾಲುಗಳ ಹಿನ್ನೆಲೆ ಅರಿತು ಟ್ವಿಟ್‌ ಮಾಡಿದ್ದರೋ, ಇಲ್ಲವೋ ಗೊತ್ತಿಲ್ಲ.ಅದರೆ ಸದ್ಯ ಡಿಲೀಟ್‌ ಆಗಿರುವ ಈ ಟ್ವಿಟ್‌ ನ ಸ್ಕ್ರೀನ್‌ ಶಾಟ್‌ ಗಳನ್ನು ರೀಟ್ವಿಟ್‌ ಮಾಡುತ್ತಿರುವ ಬಿಜೆಪಿ ನಾಯಕರು ಹಾಗೂ ನೆಟ್ಟಿಗರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ರಾಜೀವ್‌ ಗಾಂಧಿ ಈ ಸಾಲುಗಳನ್ನು ವಾಸ್ತವವಾಗಿ 1984 ರ ಸಿಖ್ ದಂಗೆಯ ಸಂದರ್ಭದಲ್ಲಿ ಬಳಸಿದ್ದರು. ಅಮೃತಸರದ ಸ್ವರ್ಣಮಂದಿರದಲ್ಲಿ ಅಡಗಿದ್ದ ಸಿಖ್‌ ಭಯೋತ್ಪಾದಕರನ್ನು ಹೊರದಬ್ಬಲು ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಡೆಸಿದ್ದ ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸ್ವತಃ ಇಂದಿರಾ ಹತ್ಯೆಗೂ ಕಾರಣವಾಗಿತ್ತು. ಇಂದಿರಾ ಗಾಂಧಿಯನ್ನು ಅವರ ಸಿಖ್‌ ಅಂಗರಕ್ಷಕರಾದ ಸತ್ವಂತ್‌ ಸಿಂಗ್‌ ಹಾಗೂ ಬಿಯಾಂತ್‌ ಸಿಂಗ್‌ ಅವರೇ ಗುಂಡಿಟ್ಟುಕೊಂದಿದ್ದರು.
ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1981ರ ನವೆಂಬರ್‌ 1ರಿಂದ ಮೂರ್ನಾಲ್ಕು ದಿನಗಳ ಕಾಲ ದೆಹಲಿ ಸೇರಿದಂತೆ ದೇಶಾದ್ಯಂತ ಸಿಖ್ಖರ ಮಾರಣಹೋಮವೇ ನಡೆಯಿತು. ಈ ವೇಳೆ 3000ಕ್ಕೂ ಹೆಚ್ಚು ಸಿಖ್ಖರ ಹತ್ಯೆಯಾಯಿತು ಎಂದು ವರದಿಗಳು ಹೇಳುತ್ತವೆ. ಈ ಗಲಭೆಯಲ್ಲಿ ಕಾಂಗ್ರೆಸ್‌ ನಾಯಕರ ಕೈವಾಡ ಇತ್ತು ಎಂಬುದು ಸಾಬೀತಾಗಿದೆ.
ಈ ಹತ್ಯಾಕಾಂಡ ಕುರಿತು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಹತ್ಯಾಕಾಂಡವನ್ನು ಸಮರ್ಥಿಸುತ್ತಾ ʼದೊಡ್ಡ ಮರ( ಇಂದಿರಾ) ಬಿದ್ದಾಗ ಭೂಮಿ (ಭಾರತ) ಸಹಜವಾಗಿ ನಡುಗುತ್ತದೆ. ಎಂದಿದ್ದರು. ಈ ಮಾತುಗಳು ಹತ್ಯಾಕಾಂಡ , ಸಾವುನೋವುಗಳಿಂದ ಪರಿತಪಿಸುತ್ತಿದ್ದ ಸಿಖ್‌ ಜನರ ಮನಸ್ಸಿನಲ್ಲಿ ಅಳಿಸಲಾಗದ ಗಾಯವಾಗಿ ಉಳಿದುಕೊಂಡಿತು.

ಅದೇ ಸಾಲುಗಳನ್ನು ಉಲ್ಲೇಖಿಸಿದ್ದ ಟ್ವಿಟ್‌ ಗೇಲಿಗೆ ತುತ್ತಾಗುತ್ತಿದ್ದಂತೆ ಡಿಲೀಟ್‌ ಮಾಡಲಾಗಿತ್ತು. ಆದರೆ ಅಷ್ಟರಲಾಗಲೇ ಟ್ವಿಟ್‌ ಕಾಂಗ್ರೆಸ್‌ ಗೆ ದೊಡ್ಡ ಮಟ್ಟದ ಮುಜುಗರ ತಂದೊಡ್ಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೌದರಿ, ನನ್ನ ಹೆಸರಿನಲ್ಲಿ ಪೋಸ್ಟ್‌ ಆಗಿರುವ ಟ್ವಿಟ್‌ ನಾನು ಮಾಡಿದ್ದಲ್ಲ. ಟ್ವಿಟರ್‌ ಖಾತೆ ಹ್ಯಾಕ್‌ ಆಗಿರುವ ಸಂಬಂಧ ದೂರು ಸಲ್ಲಿಸಿದ್ದೇನೆ. ವಿರೋಧಿ ಶಕ್ತಿಗಳು ಇಂತಹ ವಿಚಾರಗಳನ್ನು ಬಳಸಿಕೊಂಡು ನನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ʼಕಾಂಗ್ರೆಸನ್ನು ಅಧಃಪತಕ್ಕಿಳಿಸಲು ಸ್ವತಃ ಆಪಕ್ಷದ ನಾಯಕರೇ ಇಂತಹ ಉತ್ತಮ ಕೆಲಸಗಳನ್ನು ಮಾಡುವಾಗ ಇತರರು ಆ ಪಕ್ಷವನ್ನು ಕೆಳಕ್ಕೆ ಬೀಳಿಸಲು ಶ್ರಮಪಡಬೇಕಾದ ಅಗತ್ಯವೇ ಇಲ್ಲʼ ಎಂದು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಲೇವಡಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!