ಹಗರಣಗಳ ವಿಚಾರ ಬಂದಾಗ ಬಿಜೆಪಿ ಗಪ್ ಚುಪ್: ಪ್ರಿಯಾಂಕ್ ಖಗೆ೯ ವಾಗ್ದಾಳಿ

ಹೊಸದಿಗಂತ ವರದಿ,ಕಲಬುರಗಿ:

ರಾಜ್ಯದಲ್ಲಿ ಯಾವುದೇ ಹಗರಣಗಳ ವಿಚಾರ ಬಂದಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಹಾಗೂ ಇಡೀ ಪಕ್ಷ ಗಪ್ ಚುಪ್ ಆಗಿ ಬಿಡುತ್ತಾರೆ ಎಂದು ಶಾಸಕ ಪ್ರಿಯಾಂಕ್ ಖಗೆ೯ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪ ಬಂದಾಗ ಜೋರಾಗಿ ಮಾತನಾಡುವ ಬಿಜೆಪಿ ನಾಯಕರು, ಹಗರಣಗಳ ವಿಚಾರ ಬಂದಾಗ ಅವರ ಬಾಯಿಗೆ ಹೊಲಿಗೆ ಬೀಳುತ್ತದೆ. ಜಟ್ಕಾ ಕಟ್,ಹಲಾಲ್ ಕಟ್ ಬಗ್ಗೆ ಮಾತನಾಡುವ ಹಾಗೇ ಹಗರಣಗಳ ಬಗ್ಗೆಯೂ ಮಾತನಾಡಬೇಕು ಎಂದು ಖಾರವಾಗಿ ನುಡಿದರು.

ಸ್ಯಾಂಟ್ರೋ ರವಿ,ಗೆ ಕುಮಾರ್ ಕೃಪಾದಲ್ಲಿ ಇರಲು ಅವಕಾಶ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು. ಅಧಿಕಾರಿಗಳೇ ರವಿ ಅವರಿಗೆ ಫೋನ್ ಮಾಡಿ ಸಹಾಯ ಕೇಳುತ್ತಿದ್ದಾರೆ. ಯಾಕೇ ಇಲ್ಲಿಯವರೆಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿಲ್ಲ ಎಂದರು.

ಈ ಕೂಡಲೇ ಸಕಾ೯ರ ವಗಾ೯ವಣೆಯನ್ನು ಬಂದ್ ಮಾಡಬೇಕು. ಈ ಪ್ರಕರಣವನ್ನು ಸಿಬಿಐಗೆ ನೀಡಿ ಕೇವಲ ಆಂತರಿಕ ತನಿಖೆ ಮಾಡಿದರೇ,ಪ್ರಕರಣ ಮುಚ್ಚಿ ಹಾಕುತ್ತಾರೆ ಎಂದರು.

ಪಿಐಸ್ಐ ಹಗರಣದಲ್ಲಿ ಅನೇಕರಿಗೆ ಜಾಮೀನು ಮಂಜೂರು ವಿಚಾರವಾಗಿ ಮಾತನಾಡಿದ ಅವರು, ಎಂತಹ ವಕೀಲರನ್ನು ಸಕಾ೯ರ ನೇಮಿಸಿದೆ.ಗೃಹ ಸಚಿವರೆ ಟೆಕ್ನಿಕಲ್ ಎರರ್ ಆಗಿದೆ ಎಂದು ಹೇಳಿಕೆ ನೀಡುತ್ತಾರೆ. ಹೀಗಾಗಿ ಅನೇಕರಿಗೆ ಬೆಲ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!