ಕಾಂತಾರ ಕ್ಲೈಮ್ಯಾಕ್ಸ್ ಮುಗಿದಾಗ ಅಲ್ಲಿ ಬಾವಿಯಲ್ಲಿದ್ದ ನೀರು ಕೂಡಾ ಪೂರ್ತಿ ಖಾಲಿಯಾಗಿತ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನೆಮಾ ಯಾರಿಗೆ ಗೊತ್ತಿಲ್ಲ ಹೇಳಿ!

ಅದರಲ್ಲೂ ಕೊನೆಯ ಇಪ್ಪತ್ತು ನಿಮಿಷವಂತೂ ಮರೆಯಲಾಗದ ಅನುಭವ ನೀಡುತ್ತದೆ. ಈ ಸಿನೆಮಾದ ರೋಮಾಂಚಕಾರಿ ದೃಶ್ಯದ ಚಿತ್ರೀಕರಣಕ್ಕಾಗಿ ಒಂದು ಬಾವಿ ನೀರು ಪೂರ್ತಿ ಖಾಲಿಯಾಗಿತ್ತು ಎಂದರೆ ನಂಬ್ತೀರಾ?

ಹೌದು, ಚಿತ್ರದ ರೂವಾರಿ ರಿಷಬ್ ಶೆಟ್ಟಿ ಖುದ್ದು ಈ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಾಂತಾರದ ಪ್ರೀ ಕ್ಲೈಮ್ಯಾಕ್ಸ್ ಬಗ್ಗೆ ಹಾಗೂ ಈ ಚಿತ್ರೀಕರಣದ ಸಂದರ್ಭ ಚಿತ್ರತಂಡ ಎದುರಿಸಿರುವ ಸವಾಲುಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

ಜೋರು ಮಳೆ ನಡುವೆ ರಾತ್ರಿ ನಡೆಯುವ ಘಟನೆಗಳ ಚಿತ್ರೀರಣ ಭರದಿಂದ ಸಾಗಿತ್ತು. ಇವುಗಳನ್ನು 360 ಡಿಗ್ರಿ ಶಾಟ್ ತೆಗೆಯಲಾಗಿತ್ತು. ಮಳೆಯ ಇಫೆಕ್ಟ್ ಅಗತ್ಯವಿದ್ದ ಕಾರಣ ಮಾತ್ರವಲ್ಲದೆ ಸುಮಾರು ಒಂದು ವಾರದ ತನಕ ರಿಹರ್ಸಲ್ ಇದ್ದುದರಿಂದ ಅದಕ್ಕೆ ಸಾಕಷ್ಟು ನೀರಿನ ಅವಶ್ಯಕತೆಯಿತ್ತು. ಆದರೆ ಅಷ್ಟು ನೀರನ್ನು ಚಿತ್ರೀಕರಣ ಸ್ಥಳಕ್ಕೆ ತರಿಸಿಕೊಳ್ಳುವುದೂ ಕಷ್ಟವೂ ಇತ್ತು. ಹೀಗಾಗಿ ಅಲ್ಲಿಯೇ ಹತ್ತಿರವಿದ್ದ ಬಾವಿ ನೀರನ್ನು ಬಳಸಲು ನಿರ್ಧರಿಸಲಾಗಿತ್ತು. ರಿಹರ್ಸಲ್ ಮುಗಿದು, ಕೊನೆಗೆ ಚಿತ್ರೀಕರಣ ಪೂರ್ಣಗೊಂಡಾಗ ಬಾವಿಯಲ್ಲಿ ನೀರು ಕೂಡಾ ಸಂಪೂರ್ಣ ಖಾಲಿ ಆಗಿತ್ತು ಎಂದು ಆ ದಿನಗಳನ್ನು ನೆನಪಿಸಿಕೊಂಡರು ರಿಷಬ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!