ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಹಸುಗೂಸನ್ನು ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಗ್ಗಲೂರುನಲ್ಲಿ ನಡೆದಿದೆ.
ಮನು ಮತ್ತು ಹರ್ಷಿತಾ ದಂಪತಿಗೆ ಆರೂವರೆ ತಿಂಗಳಿಗೆ ಸಿಜೇರಿಯನ್ ಮೂಲಕ ಮಗು ಜನಿಸಿತ್ತು. ಮಗುವಿಗೆ ಉಸಿರಾಟದ ತೊಂದರೆಯಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಮಗು ಸಂಪೂರ್ಣ ಚೇತರಿಕೆ ಕಂಡ ಹಿನ್ನೆಲೆ ವಾರದ ಹಿಂದೆ ಮನೆಗೆ ಕರೆತರಲಾಗಿತ್ತು. ಆದರೆ ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಸೋಮವಾರ ಮಧ್ಯಾಹ್ನ 12:45ರ ಸುಮಾರಿಗೆ ಮಗು ನಾಪತ್ತೆಯಾಗಿದೆ. ಸುತ್ತಮುತ್ತ ಎಷ್ಟೇ ಹುಡುಕಾಡಿದರು ಮಗು ಪತ್ತೆಯಾಗಿರಲಿಲ್ಲ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಎಲ್ಲಾ ಕಡೆ ಹುಡುಕಾಡಿದ ನಂತರ ಟ್ಯಾಂಕರ್‌ನಲ್ಲಿ ಮಗುವಿನ ಮೃತದೇಹ ಸಿಕ್ಕಿದೆ.
ಮನು ಹಾಗೂ ಹರ್ಷಿತ ಅಂತರ್ಜಾತಿ ವಿವಾಹವಾಗಿದ್ದು, ಇದು ಕುಟುಂಬದ ಕೆಲವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ದ್ವೇಷ ಕಾರಣದಿಂದ ಮಗುವನ್ನು ಕೊಂದಿರಬಹುದು ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.