Sunday, June 4, 2023

Latest Posts

ಪುಷ್ಪ ಎಲ್ಲಿ? ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಟ್ರೈಲರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಲ್ಲು ಅರ್ಜುನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ Pushpa 2 ಟ್ರೈಲರ್ ರಿಲೀಸ್ ಆಗಿದೆ. ಅಲ್ಲು ಅರ್ಜುನ್ (ಏ.8)ರಂದು ಹುಟ್ಟುಹಬ್ಬವಾಗಿದ್ದು, ಒಂದು ದಿನ ಮುಂಚಿತವಾಗಿಯೇ ಪುಷ್ಪ 2 ಟ್ರೈಲರ್‌ ರಿಲೀಸ್‌ ಮಾಡಲಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಅಬ್ಬರ ಜೋರಾಗಿದೆ.

ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ತಪ್ಪಿಸಿಕೊಳ್ಳುವಾಗ ಪೊಲೀಸರು ಪುಷ್ಪ ಮೇಲೆ ಹತ್ತು ಸುತ್ತು ಗುಂಡು ಹಾರಿಸಿದ್ದಾರೆ. ಪುಷ್ಪನಿಗೆ ಎಂಟು ಗುಂಡುಗಳು ತಗುಲಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ.ಪುಷ್ಪನನ್ನು ದೇವರಂತೆ ಕಾಣುವ, ಅವನಿಂದ ಹಲವಾರು ಸಹಾಯಗಳನ್ನು ಪಡೆದ ಜನ ಹಲವೆಡೆ ದೊಂಬಿಗಳೆದ್ದಿವೆ, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಪುಷ್ಪನಿಗಾಗಿ ಪ್ರತಿಭಟಿಸುತ್ತಿರುವವರ ಮೇಲೆ ಪೊಲೀಸರ ಆರ್ಭಟ ಜೋರಿದೆ, ಇನ್ನೊಂದೆಡೆ ಪುಷ್ಪ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬ ಚರ್ಚೆಗಳು ಟಿವಿಯಲ್ಲಿ. ಎಲ್ಲರಲ್ಲೂ ಇರುವುದು ಒಂದೇ ಪ್ರಶ್ನೆ ಪುಷ್ಪ ಬದುಕಿದ್ದಾನಾ? ಪುಷ್ಪ ಎಲ್ಲಿದ್ದಾನೆ?ಟೀಸರ್​ನ ಕೊನೆಯಲ್ಲಿ ಅದಕ್ಕೂ ಉತ್ತರವಿದೆ.

ಮೂರು ನಿಮಿಷಕ್ಕೂ ಹೆಚ್ಚು ಅವಧಿಯ ಟೀಸರ್​ನಲ್ಲಿ ಪುಷ್ಪನಿಗಾಗಿ ಎಲ್ಲರೂ ಹುಡುಕುತ್ತಿರುವುದಾಗಿ ತೋರಿಸಲಾಗಿದೆ. ಪುಷ್ಪ ಸತ್ತು ಹೋಗಿದ್ದಾನಾ? ಬದುಕಿದ್ದಾನಾ? ಟೀಸರ್​ನ ಕೊನೆಯಲ್ಲಿ ಸಿಕ್ಕಿದೆ.

ಟೀಸರ್​ನಲ್ಲಿ ಸಿನಿಮಾದ ಕತೆಯ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಡಲಾಗಿದೆ. ಮೊದಲ ಭಾಗದಲ್ಲಿ ಸಾಮಾನ್ಯ ಕೂಲಿಯವನಾಗಿದ್ದ ಪುಷ್ಪ, ಈಗ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾನೆ. ರಕ್ತ ಚಂದನ ಸಾಗಾಣಿಕೆಯಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿದ್ದಾನೆ. ಆ ಹಣವನ್ನು ಬಡವರ ಏಳ್ಗೆಗಾಗಿ ಖರ್ಚು ಮಾಡಿ ದೊಡ್ಡ ಸಂಖ್ಯೆಯ ಜನರನ್ನು ತನ್ನ ಬೆಂಬಲಿಗರನ್ನಾಗಿ ಮಾಡಿಕೊಂಡಿದ್ದಾನೆ.

ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಅಲ್ಲು ಅರ್ಜುನ್​ರ ಪುಷ್ಪ ಪಾತ್ರದ ಹೊರತಾಗಿ ಇನ್ನಾವ ಪಾತ್ರದ ಪರಿಚಯವೂ ಇಲ್ಲ.
Pushpa 2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿ ಬರುತ್ತಿರುವ ಪುಷ್ಪ 2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!