ಸರ್ಜಿಕಲ್ ಸ್ಟ್ರೈಕ್‌ ವರದಿ ಎಲ್ಲಿದೆ: ಕೇಂದ್ರ ಸರಕಾರಕ್ಕೆ ದಿಗ್ವಿಜಯ ಸಿಂಗ್ ಪ್ರಶ್ನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

2016ರ ಸರ್ಜಿಕಲ್ ಸ್ಟ್ರೈಕ್‌ (Surgical Strike 2016) ಹಾಗೂ 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗಳ (Pulwama Terror Attack) ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಸಂಸತ್ತಿನಲ್ಲಿ ವರದಿ ಮಂಡಿಸಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ (Digvijaya Singh) ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನೇತೃತ್ವದಸರ್ಕಾರ (BJP Government) ಸುಳ್ಳನ್ನೇ ಹರಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಪುಲ್ವಾಮಾದಲ್ಲಿ ಹುತಾತ್ಮರಾದರು. ಈ ವೇಳೆ ಸಿಆರ್‌ಪಿಎಫ್ ಅಧಿಕಾರಿಗಳು ಸಿಬ್ಬಂದಿಯನ್ನ ಏರ್‌ಲಿಫ್ಟ್ ಮಾಡಬೇಕೆಂದು ಪ್ರಧಾನಿ ಮೋದಿಗೆ (Narendra Modi) ಮನವಿ ಮಾಡಿದ್ದು, ಆದ್ರೆ ಮೋದಿ ಅದಕ್ಕೆ ಒಪ್ಪಲಿಲ್ಲ. ಇಂತಹ ಲೋಪ ಹೇಗೆ ಸಂಭವಿಸಿತು? ಈವರೆಗೆ ಪುಲ್ವಾಮಾ ದಾಳಿಯ ಕುರಿತು ಒಂದೇ ಒಂದು ವರದಿಯನ್ನೂ ಸಂಸತ್ತಿನ ಮುಂದೆ ಇಟ್ಟಿಲ್ಲ ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದಲ್ಲಿರುವ ಸೇನೆಯ 12 ಬ್ರಿಗೇಡ್ ಪ್ರಧಾನ ಕಚೇರಿಗಳ ಮೇಲೆ ನಾಲ್ವರು ಭಯೋತ್ಪಾದಕರು ಗ್ರೇನೆಡ್ ದಾಳಿ ನಡೆಸಿದರು. ಈ ದಾಳಿಯಲ್ಲಿ 18 ಯೋಧರು ಹುತಾತ್ಮರಾದರು. ಉರಿ ಭಯೋತ್ಪಾದಕ ದಾಳಿಯ 10 ದಿನಗಳ ಬಳಿಕ ಸರ್ಜಿಕಲ್ ಸ್ಟ್ರೈಕ್‌ ನಡೆಸಲಾಯಿತು. ಅದರ ವರದಿಯನ್ನೂ ಸಂಸತ್ತಿನಲ್ಲಿ ಮಂಡಿಸಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರವೂ ಭಯೋತ್ಪಾದನೆ ಇನ್ನೂ ಜೀವಂತವಾಗಿದೆ. 370ನೇ ವಿಧಿ ರದ್ದಾದ ನಂತರ ಇಲ್ಲಿನ ಪರಿಸ್ಥಿತಿ ಬೆಳಕಿಗೆ ಬರುತ್ತಿಲ್ಲ. ಉದ್ದೇಶಿತ ಹತ್ಯೆ ಹಾಗೂ ಬಾಂಬ್ ಸ್ಫೋಟಗಳು ಮತ್ತೆ ಶುರುವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!