ನೇಪಾಳದ ವಿಮಾನ ಅಪಘಾತ: ಮೃತಪಟ್ಟ ಐದು ಭಾರತೀಯರ ಶವ ಕುಟುಂಬಕ್ಕೆ ಹಸ್ತಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟ ಐದು ಭಾರತೀಯರ ಶವಗಳನ್ನ ಗುರುತಿಸಲಾಗಿದೆ ಮತ್ತು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಜನವರಿ 14 ರಂದು ಯೆತಿ ಏರ್ಲೈನ್ಸ್ ಪ್ರಯಾಣಿಕ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಶವಗಳನ್ನ ನೇಪಾಳದ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ಪ್ರಾರಂಭಿಸಿದ್ದಾರೆ. ಅಪಘಾತಕ್ಕೀಡಾದ ವಿಮಾನದಲ್ಲಿ 72 ಪ್ರಯಾಣಿಕರಿದ್ದರು.

ವಿಮಾನದಲ್ಲಿ 53 ನೇಪಾಳಿ ಪ್ರಯಾಣಿಕರು, ಐವರು ಭಾರತೀಯರು ಸೇರಿದಂತೆ 15 ವಿದೇಶಿ ಪ್ರಜೆಗಳು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಅಭಿಷೇಕ್ ಕುಶ್ವಾಹ (25), ವಿಶಾಲ್ ಶರ್ಮಾ (22), ಅನಿಲ್ ಕುಮಾರ್ ರಾಜ್ಭರ್ (27), ಸೋನು ಜೈಸ್ವಾಲ್ (35) ಮತ್ತು ಸಂಜಯ್ ಜೈಸ್ವಾಲ್ ಮೃತಪಟ್ಟ ಭಾರತೀಯರಾಗಿದ್ದಾರೆ.

ಈ ಹಿಂದೆ, ನೇಪಾಳದ ಆರೋಗ್ಯ ಅಧಿಕಾರಿಗಳು ಮೃತರ ಕುಟುಂಬಗಳಿಗೆ ಎಲ್ಲಾ ಶವಗಳನ್ನು ಸೋಮವಾರ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!