October 6, 2026
Tuesday, October 6, 2026
spot_img

ಯಾವ ಕಡೆ ದಿಂಬು ಹಾಕ್ತೀರಿ ಅನ್ನೋದು ನಿಮ್ಮ ಮಾನಸಿಕ -ದೈಹಿಕ ಆರೋಗ್ಯಕ್ಕೆ ತುಂಬಾ ಮುಖ್ಯವಂತೆ!

ಸಾಮಾನ್ಯವಾಗಿ ಎಲ್ಲರೂ ಯಾವ ಕಡೆಯಲ್ಲಿ ಗಾಳಿ ಬರುತ್ತದೆ, ಕಿಟಕಿ ಎಲ್ಲಿದೆ? ಕನ್ನಡಿ ಎದುರಿಗೆ ಬರುತ್ತದಾ ಎಂದು ನೋಡಿ ಹಾಸಿಗೆಯ ದಿಂಬು ಯಾವ ಕಡೆ ಅನ್ನೋದನ್ನು ಡಿಸೈಡ್‌ ಮಾಡ್ತಾರೆ. ಆದರೆ ಇದಕ್ಕೂ ವಾಸ್ತು ಇದೆ. ಯಾವ ಕಡೆ ದಿಂಬು ಹಾಕಿದ್ರೆ ಏನು ಲಾಭ? ಇಲ್ಲಿದೆ ಡೀಟೇಲ್ಸ್‌..

ದಕ್ಷಿಣ ದಿಕ್ಕು ಅಂದರೆ ಸೌತ್‌ಗೆ ತಲೆಯನ್ನು ಇಟ್ಟು ಮಲಗುವುದು ಅತ್ಯುತ್ತಮ ಎನ್ನಲಾಗುತ್ತದೆ. ಇದು ನಿಮ್ಮ ಫಸ್ಟ್‌ ಚಾಯ್ಸ್‌ ಆಗಿರಲಿ. ಈ ಕಡೆ ತಲೆ ಹಾಕಿ ಮಲಗಿದರೆ ಉತ್ತಮ ನಿದ್ದೆ, ದೀರ್ಘಾಯಸ್ಸು ಹಾಗೂ ಮಾನಸಿಕ ನೆಮ್ಮದಿ ಇರುತ್ತದೆ.

ಪೂರ್ವ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಅಥವಾ ಯಾವುದಾದರೂ ಪರೀಕ್ಷೆಗಳಿಗೆ ತಯಾರಾಗುತ್ತಿರುವವರು ಮಲಗಬಹುದು. ಇದರೊಂದ ಜ್ಞಾಪಕ ಶಕ್ತಿ, ಏಕಾಗ್ರತೆ ಹಾಗೂ ಸೃಜನಶೀಲತೆ ಹೆಚ್ಚಾಗುತ್ತದೆ.

ಇನ್ನು ಉತ್ತರ ದಿಕ್ಕಿಗೆ ಮಾತ್ರ ಮಲಗಬೇಡಿ. ಇದು ಭೂಮಿಯ ಕಾಂತೀಯ ಆಕರ್ಷಣೆಯಿಂದಾಗಿ ಮೆದುಳಿಗೆ ಒತ್ತಡ ನೀಡುತ್ತದೆ. ಈ ಕಡೆ ಮಲಗುವುದರಿಂದ ನಿದ್ದೆ ಬಾರದಿರುವುದು, ಕೆಟ್ಟ ಕನಸುಗಳು ಬೀಳುವುದು ಮಾಮೂಲಿ.

Must Read