Tuesday, March 28, 2023

Latest Posts

ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗಲೇ ನವ ವಿವಾಹಿತ ಯೋಧ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯೋಧರೊಬ್ಬರು ಕರ್ತವ್ಯಕ್ಕೆ ಮರಳಿದ ಒಂದೇ ವಾರದಲ್ಲಿ ಮೃತಪಟ್ಟ ಘಟನೆ ಕಾಶ್ಮೀರದ ಲಡಾಕ್‌ನಲ್ಲಿ ನಡೆದಿದೆ.

ಕೇರಳದ ಕುನಿ ಮೂಲದ ಕೋಲೋತ್ತೋಡಿ ನುಫೈಲ್ (27) ಮೃತ ಯೋಧ. ಆರ್ಮಿ ಪೋಸ್ಟಲ್​ ಸರ್ವಿಸ್​ನಲ್ಲಿ ಸಿಪಾಯಿ ಆಗಿದ್ದ ನುಫೈಲ್ ಜನವರಿ 22ರಂದು ಕರ್ತವ್ಯಕ್ಕೆ ಮರಳಿದ್ದರು. ಗುರುವಾರ ಬೆಳಿಗ್ಗೆ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ ರಾತ್ರಿ ಸಾವನ್ನಪ್ಪಿದ್ದಾರೆ. ಪತ್ನಿ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಜನವರಿ 2ರಂದು ಮುಕ್ಕಮ್​ನ ಕುಲನಗರದ ಯುವತಿಯನ್ನು ವರಿಸಿದ್ದ ನುಫೈಲ್ , ಜನವರಿ 22ರಂದು ಕರ್ತವ್ಯಕ್ಕೆಂದು ಲಡಾಕ್‌ಗೆ ತೆರಳಿದ್ದರು. ಎಂಟು ವರ್ಷಗಳಿಂದ ಅವರು ಸೇನೆಯಲ್ಲಿದ್ದರು. ಅನಾರೋಗ್ಯದಿಂದಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!