Sunday, December 10, 2023

Latest Posts

CINE | ಕಲ್ಯಾಣಕ್ಕೆ ರೆಡಿಯಾದ ಸೀತಾಮಹಾಲಕ್ಷ್ಮಿ, ಮೃಣಾಲ್ ವರಿಸೋದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೀತಾರಾಮಂ ಮೂಲಕ ಮನೆಮಾತಾದ ನಟಿ ಮೃಣಾಲ್ ಠಾಕೂರ್ ಹಸೆಮಣೆ ಏರ‍್ತಿದ್ದಾರೆ ಅನ್ನೋ ಗುಸುಗುಸು ಎದ್ದಿದೆ.

ಅದರಲ್ಲಿಯೂ ಹುಡುಗ ಹೈದರಾಬಾದ್‌ನವನೇ ಎನ್ನುವ ಮಾಹಿತಿ ಹೊರಬಿದ್ದಿದೆ, ಇದಕ್ಕೆ ಕಾರಣ ನಿರ್ಮಾಪಕ ಅಲ್ಲು ಅರವಿಂದ್, ಹೌದು, ಕಾರ್ಯಕ್ರಮವೊಂದರಲ್ಲಿ ಅಲ್ಲು ಅರವಿಂದ್ ಮೃಣಾಲ್‌ಗೆ ಶೀಘ್ರದಲ್ಲೇ ಮದುವೆಯಾಗಲಿ, ಹೈದರಾಬಾದ್‌ನಿಂದ ವರ ಬರಲಿ ಎಂದು ಹಾರೈಸಿದ್ದಾರೆ.

ಈ ಹಿಂದೆ ಅಲ್ಲು ಇದೇ ರೀತಿ ಲಾವಣ್ಯ ತ್ರಿಪಾಠಿಗೆ ಶುಭ ಹಾರೈಸಿದ್ದಾರೆ, ಅದಾದ ವರ್ಷದಲ್ಲಿ ಲಾವಣ್ಯ ಮದುವೆಯಾಗಿದ್ದಾರೆ. ಇದೀಗ ಮದುವೆಗೆ ಮೃಣಾಲ್ ಸರದಿಯಾಗಿದ್ದು, ಸೀತಾಮಹಾಲಕ್ಷ್ಮಿ ಯಾರನ್ನು ವರಿಸ್ತಾರೆ? ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!