ಭಾರತಕ್ಕೆ ಪ್ರವಾಸ ಬಂದಿದ್ದ ಫ್ರಾನ್ಸ್ ಪ್ರಜೆ ಅಪಘಾತದಲ್ಲಿ ಸಾವು

ಹೊಸದಿಗಂತ ವರದಿ ಕೊಪ್ಪಳ:

ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆಯು ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಫ್ರಾನ್ಸ್‌ ದೇಶದ ನಾನ್ಸೆಲಿಯೆ‌ ದಿದಿಯೆ (63) ಮೃತಪಟ್ಟ ವ್ಯಕ್ತಿ.

ಅ. 24ರಂದು ಚೆನ್ನೈ ಮೂಲಕ ಭಾರತಕ್ಕೆ ಬಂದಿತ್ತು. ದೇಶದ ಪ್ರವಾಸಿ ತಾಣಗಳನ್ನು ಸುತ್ತಲು ಚೆನ್ನೈನಲ್ಲಿ ಬೈಕ್‌ಗಳನ್ನು ಬಾಡಿಗೆ ಪಡೆದುಕೊಂಡು ಹಂಪಿಗೆ ಬಂದಿದ್ದರು. ಇಲ್ಲಿಂದ ಗೋವಾಕ್ಕೆ ಹೋಗಲು ತೀರ್ಮಾನಿಸಿದ್ದರು. ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೈಕ್ ಮಗುಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!